ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಿಟ್ಲ ವಲಯ ಒಕ್ಕೆತ್ತೂರು ಒಕ್ಕೂಟದ ತ್ರೈಮಾಸಿಕ ಸಭೆಯಲ್ಲಿ ಆರೋಗ್ಯದಲ್ಲಿ ಯೋಗದ ಪಾತ್ರದ ಬಗ್ಗೆ ಅಳಿಕೆ ಸತ್ಯಸಾಯಿ ವಿದ್ಯಾ ಸಂಸ್ಥೆಯ ಯೋಗ ಗುರು ಆನಂದ ಶೆಟ್ಟಿ ಮಾಹಿತಿ ನೀಡಿದರು. ಮೇಲ್ವಿಚಾರಕಿ ಪ್ರೇಮ, ಸೇವಾಪ್ರತಿನಿಧಿ ಪ್ರಕಾಶ್ ಕುಲಾಲ್, ಒಕ್ಕೂಟದ ಅಧ್ಯಕ್ಷ ಸೋಮಪ್ಪ ಸುರುಳಿಮೂಲೆ, ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು ಗೆಳತಿ ಸ್ವಸಹಾಯ ಸಂಘದ ಜಗದೀಶ ಸ್ವಾಗತಿಸಿದರು. ಉದನೇಶ್ವರಿ ವಂದಿಸಿದರು.

