ಬಂಟ್ವಾಳ: ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಆರಂಭಿಸಿದಂತಹ ಆಮ್ ಆದ್ಮಿ ವಿಮಾ ಯೋಜನೆಯನ್ನು ಅಂದಿನಿಂದ ಇಂದಿನವರೆಗೆ ನಿರಂತರವಾಗಿ ಜನ ಸಾಮಾನ್ಯರಿಗೆ ತಲುಪಿಸುವಂತಹ ಮಹತ್ತರ ಕಾರ್ಯವನ್ನು ಸೇವಾಂಜಲಿಯು ಮಾಡಿಕೊಂಡು ಬಂದಿದೆ, ಇದಕ್ಕಾಗಿ ಸದಾ ನಿಸ್ವಾರ್ಥ ಸೇವೆಗೈಯುತ್ತಿರುವ ಸೇವಾಂಜಲಿಯ ಪದಾಧಿಕಾರಿಗಳು ಹಾಗು ಕಾರ್ಯಕರ್ತರಿಗೆ ದೇವರು ಒಳಿತನ್ನು ಉಂಟು ಮಾಡಲಿ ಎಂದು ಅರ್ಕುಳ ಬೀಡು ವಜ್ರನಾಭ ಶೆಟ್ಟಿಯವರು ಹೇಳಿದರು.
ಅವರು ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ನಡೆಸಿಕೊಂಡು ಬರುತ್ತಿರುವ ಭಾರತೀಯ ಜೀವ ವಿಮಾ ನಿಗಮದ ಆಮ್ ಆದ್ಮಿ ಯೋಜನೆಯ ಸದಸ್ಯ ಶಂಭೂರು ಗ್ರಾಮದ ರುಕ್ಮ ನಲಿಕೆಯವರು ಮೃತಪಟ್ಟ ಹಿನ್ನೆಲೆಯಲ್ಲಿ ಪರಿಹಾರ ಮೊತ್ತ ರೂ.31 ಸಾವಿರವನ್ನು ಮೃತರ ಪತ್ನಿ ಲೀಲಾ ನಲಿಕೆ ಇವರಿಗೆ ಸೇವಾಂಜಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಿ ಮಾತನಾಡಿದರು
ವೇದಿಕೆಯಲ್ಲಿ ಸೇವಾಂಜಲಿಯ ಆಡಳಿತ ಟೃಸ್ಟಿ ಕೃಷ್ಣಕುಮಾರ್ ಪೂಂಜ, ಸೇವಾಂಜಲಿಯ ಟ್ರಸ್ಟಿ ಪ್ರಕಾಶ್ ಕೆ., ಬಿ.ನಾರಾಯಣ ಬೆಳ್ಚಾಡ, ಪದ್ಮನಾಭ ಕಿದೆಬೆಟ್ಟು, ಲೋಕೇಶ್ ಕಲ್ಲತಡಮೆ, ದಿವಾಕರ ಏಲಬೆ, ಅಬ್ದುಲ್ ಲತೀಫ್ ಅರ್ಕುಳ ಮತ್ತಿತರರು ಉಪಸ್ಥಿತರಿದ್ದರು.
