ಬಂಟ್ವಾಳ ; ಮುಲ್ಕಾಜೆಮಾಡ ಓಂ ಶಕ್ತಿ ಫ್ರೆಂಡ್ಸ್ ಇದರ ವತಿಯಿಂದ ಅರಣ್ಯ ಇಲಾಖೆಯ ಸಹಭಾಗಿತ್ವದೊಂದಿಗೆ ವನಮಾವೋತ್ಸವ ಮತ್ತು ಸಸಿವಿತರಣಾ ಕಾರ್ಯಕ್ರಮವು ಜರುಗಿತು.ಸಸಿ ನೆಟ್ಟು ಕಾರ್ಯಕ್ರಮ ಉದ್ಘಾಟಿಸಿದ ವಲಯ ಅರಣ್ಯ ಅಧಿಕಾರಿ ಅನಿಲ್ ಕುಮಾರ್ ಬಳಿಕ ಮಾತನಾಡಿ ಅರಣ್ಯ ರಕ್ಷಣೆಯ ಮತ್ತು ವನಮಾವೋತ್ಸವದ ಮಹತ್ವವನ್ನು ವಿವರಿಸಿದರು.IMG-20170802-WA0055

ಅತಿಥಿಯಾಗಿದ್ದ ರಮೇಶ್ ಕುಮಾರ್ ವಗ್ಗ ರವರು ಮಾತನಾಡಿ ಅರಣ್ಯ ಸಂರಕ್ಷಣೆ ಕೇವಲ ಸರಕಾರದಮತ್ತುಅಧಿಕಾರಿಗಳಕೆಲಸವಾಗಿರದೆ,ಅದು ನಮ್ಮೆಲ್ಲರ ಕರ್ತವ್ಯದಲ್ಲೊಂದಾಗಿದೆ ಎಂದರು. ಹಸಿರು ಕ್ರಾಂತಿಯ ಹರಿಕಾರರಾದ ಮಂಗಳೂರಿನ ಮಾಧವ ಉಳ್ಳಾಲ್ ಮತ್ತು ಸಾಲುಮರದತಿಮ್ಮಕ್ಕರಂತಹವರು ಹಳ್ಳಿ ,ಹಳ್ಳಿಗಳಲ್ಲಿ ನಿರ್ಮಾಣವಾಗಬೇಕು ಎಂದ ಅವರು ನಮ್ಮ ಸುತ್ತಮುತ್ತಲಿನ ಪರಿಸರದ ರಕ್ಷಣೆಗೆ ಮುಂದಾಗದಿದ್ದಲ್ಲಿ ಮುಂದಿನ ಪೀಳಿಗೆಯು ಮರ ಗಿಡಗಳನ್ನು ಕೇವಲ ಪುಸ್ತಕದಲ್ಲಿ ಇಲ್ಲವೇ ಪತ್ರಿಕೆಗಳಲ್ಲಿ ನೋಡಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದರು. ಅರಣ್ಯ ಸಂರಕ್ಷಣೆ ಮಾಡುವುದರೊಂದಿಗೆ ಉತ್ತಮ ಆರೋಗ್ಯಯುತ ವಾತಾವರಣ ನಿರ್ಮಿಸಬೇಕು ಮತ್ತು ಅರಣ್ಯಕ್ಕೆ ಮಾರಕವಾಗುತ್ತಿರುವ ಕಲ್ಲಿನ ಕೋರೆಗಳನ್ನು ಅರಣ್ಯಪ್ರದೇಶದಲ್ಲಿ ನಿಷೇಧಿಸುವ ನಿಟ್ಟಿನಲ್ಲಿ ಸರಕಾರವು ಗಮನಹರಿಸಬೇಕೆಂದು ಒತ್ತಾಯಿಸಿದರು .ವೇದಿಕೆಯಲ್ಲಿ ಓಂ ಶಕ್ತಿ ಫ್ರೆಂಡ್ಸ್ ಅಧ್ಯಕ್ಷ ಸಿ.ಡೊಂಬಯ್ಯ ನಾಯ್ಕ್ ,ಅರಣ್ಯ ಅಧಿಕಾರಿಲಕ್ಷ್ಮಿನಾರಾಯಣ್‍ಉಪಸ್ಥಿತರಿದ್ದರು.ಸದಸ್ಯರಾದ ನಿತೇಶ್ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

By suddi9

Leave a Reply

Your email address will not be published. Required fields are marked *