ಬಂಟ್ವಾಳ : ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ 2017-18ನೇ ಸಾಲಿನ ಚಟುವಟಿಕೆಗಳ ಉದ್ಘಾಟನೆಯು ನಡೆಯಿತು. ಮುಡಿಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಂಗ್ಲ ಭಾಷೆಯ ಪ್ರಾಧ್ಯಾಪಕ ಪ್ರೊ. ನಂದಕಿಶೋರ್.ಎಸ್ ಅವರು ಉದ್ಘಾಟಿಸಿ ಜೀವನ ಶಿಸ್ತು, ವ್ಯಕ್ತಿತ್ವ ವಿಕಸನ, ಸೌಹಾರ್ಧತೆ, ಸಾಮರಸ್ಯದ ಬದುಕಿಗೆ ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳ ಪ್ರೇರಣೆ” ಸ್ವಯಂ ಸೇವಕನೊಬ್ಬ ಯೋಗ್ಯ ನಾಗರಿಕನಾಗಿ ರಾಷ್ಟ್ರದ ಸೊತ್ತಾಗಿ ರೂಪುಗೊಳ್ಳಲು ಎನ್ನೆಸ್ಸೆಸ್ ವೇದಿಕೆಯನ್ನು ಒದಗಿಸುತ್ತದೆ ಎಂದರು.nss photo

ಕಾಲೇಜು ಅಭಿವೃದ್ಧಿ ಸಮಿತಿಯ  ಸದಸ್ಯ ಶ್ರೀಧರ ಪೈ, ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್ ಅಮೀನ್, ಘಟಕದ ನಾಯಕರಾದ ಮಹೇಶ್.ಎಂ, ಸಂದೇಶ್, ಸಿಂಚನ್.ಡಿ. ಆರ್, ಮೋಹಿನಿ.ಕೆ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಕಾಲೇಜಿನ  ಹಿರಿಯ ಉಪನ್ಯಾಸಕ ಪ್ರೊ. ಹರಿಪ್ರಸಾದ್ ಬಿ. ಶೆಟ್ಟಿ ವಹಿಸಿದ್ದರು. ಘಟಕ ಟ ರ ಯೋಜನಾಧಿಕಾರಿ ಪೊ..ಸುರೇಶ್ ವಿಟ್ಲ ಪ್ರಸ್ತಾವಿಕವಾಗಿ ಮಾತಾನಾಡಿ , ಕು.ಸ್ವಾತಿ ಸ್ವಾಗತಿಸಿ, ಘಟಕ ಟಟ ರ  ಯೋಜನಾಧಿಕಾರಿ  ಪ್ರೊ. ರೋನಾಲ್ಡ್ ಪ್ರವೀಣ್ ಕೊರೆ ವಂದಿಸಿ ಕು. ಪ್ರತೀಕ್ಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *