ಬಂಟ್ವಾಳ;  ಭಗವಂತನ ಆರಾಧನೆ ಮಾಡಿದರೆ ಸಾಲದು, ಆತ್ಮದಲ್ಲಿರುವ ವಿಕಲ್ಪ ಭಾವನೆಗಳನು ದೂರವಿಡಬೇಕು ಎಂದು108 ಮುನಿ ಶ್ರೀ ವೀರ ಸಾಗರ ಮಹಾರಾಜರರು ಕರೆ ನೀಡಿದ್ದಾರೆ. ಚಾತುರ್ಮಾಸ ವೃತಾಚರಣೆಯಲ್ಲಿರುವ 108 ಮುನಿ ಶ್ರೀ ವೀರ ಸಾಗರ ಮಹಾರಾಜ ರು ವರ್ಷಾಯೋಗ ನಿಮಿತ್ತ ಭಾನುವಾರ ಪಾಣೆಮಂಗಳೂರು ಶ್ರೀ ಅನಂತನಾಥ ಸ್ವಾಮಿ ಜಿನಚೈತ್ಯಾಲಯದಲ್ಲಿ ಮಂಗಲ ಪ್ರವಚನ  ನೀಡಿದರು. IMG_20170731_154648_287ಸ್ವಾರ್ಥ ಬುದ್ದಿಯಿಂದ ನಮ್ಮ ಉದ್ದಾರ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ ಅವರು, ವರ್ತಮಾನದ ಬದುಕಿಗೆ ಬೇಕಾಗಿ ನಮ್ಮ ಒಡಹುಟ್ಟಿದವರ ಮೇಲೆ ವೈರತ್ವ ಸಾಧಿಸುವ ಹಂತದಲ್ಲಿದ್ದೇವೆ ಎಂದು ವಿಷಾಧಿಸಿದರು. ಮೋಹ ಮತ್ತು ಸ್ವಾರ್ಥವನ್ನು ದೂರವಿಟ್ಟಾಗ ಮಾತ್ರ ನಮಗೆ ಮೋಕ್ಷ ಸಿಗುತ್ತದೆ ಎಂದವರು ತಿಳಿಸಿದರು. ಇದೇ ವೇಳೆ “ಮುಕುಟ ಸಪ್ತಮಿ ಪೂಜೆ, ನವಲಬ್ದಿ ಆರಾಧನೆ” ನಡೆಸಿಕೊಟ್ಟ ಪಾಣೆಮಂಗಳೂರು ಜೈನರ ಪೇಟೆಯ ಕರ್ಬೆಟ್ಟು ಕುಟುಂಬಸ್ತರಿಗೆ ಮಹಾರಾಜರು ಗೌರವ ಸಲ್ಲಿಸಿದರು.

By suddi9

Leave a Reply

Your email address will not be published. Required fields are marked *