ಬಂಟ್ವಾಳ: ಬಂಟ್ವಾಳ ಪುರಸಭೆ ಮತ್ತು ಯೋಜನಾ ಪ್ರಾಧಿಕಾರ ಜಂಟಿ ಆಶ್ರಯದಲ್ಲಿ ಪುರಸಭಾ ಸಭಾಭವನದಲ್ಲಿ ಪುರಸಭಾ ವ್ಯಾಪ್ತಿಯ ನೋಂದಾಯಿತ ವಿನ್ಯಾಸಗಾರರ ಸಭೆ ನಡೆಯಿತು.ಸಭೆಯಲ್ಲಿ ಪುರಸಭಾ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಬಂಗೇರ, ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್, ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೊ ಸಹಿತ ಅಧಿಕಾರಿಗಳು ಇಂಜಿನಿಯರುಗಳು ಉಪಸ್ಥಿತರಿದ್ದರು.
ಈ ಸಂದರ್ಭ ಏಕನಿವೇಶನದಲ್ಲಿ ರಸ್ತೆಗಾಗಿ ಬಿಟ್ಟುಕೊಟ್ಟ ಸ್ಥಳವನ್ನು ಸ್ವಂತ ಖರ್ಚಿನಿಂದ ಅಭಿವೃದ್ಧಿಗೊಳಿಸುವುದು, ಅನುಮೋದಿತ ನಕ್ಷೆಗೆ ವ್‍ಸದಾಶಿವ ಬಂಗೇರ, ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್, ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೊ ಸಹಿತ ಅಧಿಕಾರಿಗಳು ಇಂಜಿನಿಯರುಗಳು ಉಪಸ್ಥಿತರಿದ್ದರು.
ಈ ಸಂದರ್ಭ ಏಕನಿವೇಶನದಲ್ಲಿ ರಸ್ತೆಗಾಗಿ ಬಿಟ್ಟುಕೊಟ್ಟ ಸ್ಥಳವನ್ನು ಸ್ವಂತ ಖರ್ಚಿನಿಂದ ಅಭಿವೃದ್ಧಿಗೊಳಿಸುವುದು, ಅನುಮೋದಿತ ನಕ್ಷೆಗೆ ವ್ಯತಿರಿಕ್ತವಾಗಿ ಕಟ್ಟಡ ನಿರ್ಮಾಣ, ಕಟ್ಟಡ ನಿರ್ಮಾಣ ವೆಚ್ಚಗಳ ಅಂದಾಜುಪಟ್ಟಿಯನ್ನು ಸಮರ್ಪಕವಾಗಿ ನೀಡುವ ಕುರಿತು, ಕಟ್ಟಡ ನಿರ್ಮಾಣದ ಅಂತಿಮ ವರದಿಯನ್ನು ಕಟ್ಟಡಕ್ಕೆ ಸಂಬಂಧಿಸಿದ ಎಲ್ಲ ತಾಂತ್ರಿಕ ಟಿಪ್ಪಣಿಗಳನ್ನು ನಮೂದಿಸಿ ನಿಗದಿತ ನಮೂನೆಯಲ್ಲಿ ನೀಡುವುದು, ರಸ್ತೆ ನಿರ್ಮಾಣ, ಕಟ್ಟಡದ ಎತ್ತರ, ಕಟ್ಟಡದ ಸಾಮಥ್ರ್ಯ, ನಕ್ಷೆ ಅಳವಡಿಕೆ, ಎಸ್‍ಟಿಪಿ, ರಸ್ತೆಗೆ ಅಡ್ಡಿಯಾಗದಂತೆ ಸಾಮಗ್ರಿಗಳ ಶೇಖರಣೆ ಸಹಿತ ವಿವಿಧ ವಿಚಾರಗಳಿಗೆ ಸಂಬಂಧಿಸಿ ಕಾಯಿದೆ, ಪರವಾನಗಿ, ನಿಬಂಧನೆಯಲ್ಲಿ ಅಗತ್ಯಪಡಿಸಿದ ಎಲ್ಲ ಸೂಚನೆಗಳನ್ನು ಪಾಲಿಸುವ ಕುರಿತು ಚರ್ಚೆಗಳು ನಡೆದವು.
