ಪೊಳಲಿ : ಶ್ರೀ ದುರ್ಗಾ ರಾಜಾರಾಜೇಶ್ವರಿ ದೇವಾಲಯದ ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗುತ್ತಿದೆ. ದೇವಾಲಯದ ನವೀಕರಣ ಕಾರ್ಯದ ಪ್ರಯುಕ್ತ ನಡೆದ ತಾಂಬೂಲ ಪ್ರಶ್ನೆಯಲ್ಲಿ ಕಂಡುಬಂದಂತೆ ಕೆಲ ಪ್ರಾಯಶ್ಚಿತ ಕಾರ್ಯಗಳು ಜು 30 ರಂದು ಜರುಗಿದವು. 

ಬೆಳಗ್ಗೆ 8;30ಕೆ ಪ್ರಾರ್ಥನೆಯಿಂದ ಮೊದಲ್ಗೊಂಡು ಅಷ್ಟೋತ್ತರ ಶತನಾಲಿಕೇರ ಗಣಪತಿ ಹೋಮ ಮತ್ತು ಲಲಿತಾ ಸಹಸ್ರನಾಮ ಪಾರಾಯಣ ಪ್ರಾಯಶ್ಚಿತ ಕಾರ್ಯದ ಭಾಗವಾಗಿದ್ದಿತ್ತು. ತದನಂತರ ಪೊಳಲಿ ಸಾವಿರ ಸೀಮೆಯ ಭಕ್ತರಿಂದ ಮುಷ್ಠಿ ಕಾಣಿಕೆ , ಹಾಗೂ ದುರ್ಗಾ ನಮಸ್ಕಾರ ಪೂಜೆಯನ್ನೂ ಸಹಾ ನೆರವೇರಿಸಲಾಯ್ತು.ಮದ್ಯಾಹ್ನ 2 ಗಂಟೆಗೆ ಸಾವಿರ ಸೀಮೆಯ ಭಕ್ತಾದಿಗಳ ಸಭೆಯನ್ನು ಕರೆದ ಪ್ರಾಯಶ್ಚಿತ ಕಾರ್ಯಗಳ ಕುರಿತಾದ ವರದಿಯನ್ನು ತಿಳಿಸಲಾಯ್ತು. 

ಕಾರ್ಯಕ್ರಮದಲ್ಲಿ ದೇವಾಲಯದ ಆಡಳೀತ ವರ್ಗ , ಅರ್ಚಕ ವೃಂದ , ತಂತ್ರಿಗಳು ಹಾಗೂ ದೇವಾಲಯದ ಭಕ್ತರು ಉತ್ಸುಕತೆಯಿಂದ ಭಾಗವಹಿಸಿದ್ದರು.
