ಸಿದ್ಧಕಟ್ಟೆ: ವಿದ್ಯಾರ್ಥಿ ದೆಸೆಯಲ್ಲಿಯೇ ಪಠ್ಯಗಳೊಂದಿಗೆ ದಿನನಿತ್ಯದ ಪತ್ರಿಕೆಗಳಲ್ಲಿನ ದೇಶ-ವಿದೇಶದ ಪ್ರಸ್ತುತ ವಿದ್ಯಮಾನಗಳ ಜ್ಞಾನ, ದೇಶದಲ್ಲಿ ಜಾರಿಯಲ್ಲಿರುವ ಕಾನೂನುಗಳ ಬಗ್ಗೆ ತಿಳಿದುಕೊಂಡು ಕಠಿಣ ಪರಿಶ್ರಮದಿಂದ ನಿರಂತರವಾಗಿ ಅಧ್ಯಯನ ಕೈಗೊಂಡಲ್ಲಿ ಐ.ಎ.ಎಸ್, ಕೆ.ಎ.ಎಸ್.ನಂತಹ ಸುಮಾರು 25 ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉತ್ತೀರ್ಣರಾಗಲು ಸಾಧ್ಯ ಎಂದು 2016ರ ಸಾಲಿನ ಯುಪಿಎಸ್‍ಸಿ ಪರೀಕ್ಷೆಯಲ್ಲಿ 37ನೇ ರ್ಯಾಂಕ್ ಪಡೆದ ನವೀನ್ ಭಟ್ ಬಂಟ್ವಾಳ ಅಭಿಪ್ರಾಯಪಟ್ಟರು.NEWS
ಸಿದ್ಧಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸಿದ್ಧಕಟ್ಟೆ ರೋಟರಿ ಸಮುದಾಯ ದಳ ಇದರ ಜಂಟಿ ಆಶ್ರಯದಲ್ಲಿ ಸಿದ್ಧಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ‘ಸದ್ಭಾವನಾ ಸಭಾಂಗಣ’ದಲ್ಲಿ ಪದವಿ ಹಾಗೂ ಪದವಿ ಪೂರ್ವ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಪೂರಕ ಮಾಹಿತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಶನಿವಾರ ಮಾತನಾಡಿದರು.
ಬಂಟ್ವಾಳ ತಾ.ಪಂ. ಸದಸ್ಯ, ಸಿದ್ಧಕಟ್ಟೆ ಸ.ಪ.ಪೂ.ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪ್ರಭಾಕರ ಪ್ರಭು ಪ್ರಸ್ತಾವಿಕ ಮಾತುಗಳೊಂದಿಗೆ 2016ರ ಸಾಲಿನ ಯುಪಿಎಸ್‍ಸಿ ಪರೀಕ್ಷೆಯಲ್ಲಿ 37ನೇ ರ್ಯಾಂಕ್ ಪಡೆದ ನವೀನ್ ಭಟ್ ಬಂಟ್ವಾಳ ಅವರನ್ನು ಪರಿಚಯಿಸಿದರು. ಬಳಿಕ ಮಾತನಾಡಿ, ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಐ.ಎ.ಎಸ್, ಕೆ.ಎ.ಎಸ್. ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಪದವಿ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾಭ್ಯಾಸ ಜೊತೆಗೆ ಇಂದಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ಸಿದ್ಧತಾ ಮಾಹಿತಿ ಪಡೆದು ಯೋಜನೆಗಳನ್ನು ರೂಪಿಸಬೇಕು ಎಂದರು.
ಸಿದ್ಧಕಟ್ಟೆ ರೋಟರಿ ಸಮುದಾಯ ದಳ ಅಧ್ಯಕ್ಷ ವಾಸುದೇವ ಆಚಾರ್ಯ ಶುಭ ಹಾರೈಸಿದರು. ಸಿದ್ಧಕಟ್ಟೆ ಸ.ಪ್ರ.ದ.ಕಾಲೇಜು ಪ್ರಾಂಶುಪಾಲ ಪ್ರೊ. ಸತ್ಯನಾರಾಯಣ ಭಟ್, ಸಿದ್ಧಕಟ್ಟೆ ಸ.ಪ.ಪೂ.ಕಾಲೇಜು ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ರಮಾನಂದ, ಸಿದ್ಧಕಟ್ಟೆ ರೋಟರಿ ಸಮುದಾಯ ದಳ ಚೇರ್‍ಮೆನ್ ದಾಮೋಧರ ಶೆಟ್ಟಿಗಾರ್,ಪಿ.ಡಬ್ಲ್ಯು.ಡಿ. ಸಹಾಯಕ ಅಭಿಯಂತರ ಉಮೇಶ್ ಭಟ್, ಸಿದ್ಧಕಟ್ಟೆ ಸ.ಪ.ಪೂ.ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ ಶೀನಪ್ಪ ಎನ್.ಉಪಸ್ಥಿತರಿದ್ದರು.
ಸಿದ್ಧಕಟ್ಟೆ ಸ.ಪ.ಪೂ.ಕಾಲೇಜು ಪ್ರಾಂಶುಪಾಲ ಶ್ರೀನಿವಾಸ ನಾಯ್ಕ ಸ್ವಾಗತಿಸಿದರು. ಸಿದ್ಧಕಟ್ಟೆ ಸ.ಪ್ರ.ದ.ಕಾಲೇಜಿನ ಗ್ರಂಥಾಲಯ ವಿಭಾಗದ ಮುಖ್ಯಸ್ಥ ಶ್ರೀನಿವಾಸ್ ವಂದಿಸಿದರು.ಸಿದ್ಧಕಟ್ಟೆ ಸ.ಪ.ಪೂ.ಕಾಲೇಜು ಉಪನ್ಯಾಸಕ ಸಂಜಯ್ ಬಿ.ಎಸ್.., ಪ್ರಾಧ್ಯಾಪಕಿ ನಸೀಮಾ ಬೇಗಮ್ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *