ಕುಪ್ಪೆಪದವು : ಪ್ರೌಢಶಾಲಾ ಮಕ್ಕಳಿಗೆ ಸರಕಾರದ ವತಿಯಿಂದ ಕೊಡಮಾಡಲ್ಪಡುವ ಸೈಕಲ್ ವಿತರಣಾ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕರಾದ ಮೋಹಿಯುದ್ದೀನ್ ಬಾವಾ ಅವರು ಜೆಡಿಎಸ್ ನ ಪ್ರತಿಭಟನೆ ಎದುರಿಸಬೇಕಾದ ಪ್ರಮೇಯ ಎದುರಾಯಿತು.ಇತ್ತಿಚೆಗೆ ಶಾಸಕರ ಅನುದಾನ ನಿಧಿಯಿಂದ ರಸ್ತೆಯೊಂದರ ಕಾಮಾಗಾರಿಗೆ 4.5 ಲಕ್ಷ ರುಪಾಯಿಗಳನ್ನು ಮಂಜೂರು ಮಾಡಲಾಗಿತ್ತು ಆದರೆ ಆ ರಸ್ತೆಯಲ್ಲಿ ಕೇವಲ ಗ್ರಾಮ ಪಂಚಾಯತ್ ಅಧ್ಯಕ್ಷನ ಮನೆ ಬಿಟ್ಟರೆ ಬೇರಾವ ಮನೆಯೂ ಇಲ್ಲ ಆದುದರಿಂದ ಆ ಅನುದಾನವನ್ನು ಹಿಂದೂ ರುದ್ರಭೂಮಿಯ ರಸ್ತೆಯ ಅಭಿವೃದ್ಧೀಗೆ ಬಳಸಬಹುದಿತ್ತು ಎಂದು ಮನವಿ ಸಲ್ಲಿಸಲು ಹೋದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮತುಕತೆ ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸೂಚನೆಯನ್ನರಿತ ಕಾಂಗ್ರೆಸ್ ಕಾರ್ಯಕರ್ತರು ಬಾವಾರನ್ನು ಕಾರಿನಲ್ಲಿ ಕುಳ್ಳಿರಿಸಿ ಅವರ ಕಾರ್ಯಕ್ರಮಕ್ಕೆ ಎಡೆಮಾಡಿಕೊಟ್ಟರು.IMG-20170728-WA0267

ಆದರೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ ಕುಪ್ಪೆಪದವು ಗ್ರಾಮ ಪಂಚಾಯತ್‍ನಲ್ಲಿ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಪಡೆದಿದ್ದರೆ ಉಪಾದ್ಯಕ್ಷ ಸ್ಥಾನವನ್ನು ಜೆಡಿಎಸ್ ಹಂಚಿಕೊಂಡು ದೋಸ್ತಿ ರಾಜಕೀಯ ಮಾಡಿಕೋಂಡಿವೆ ಆದರೆ ಇಂದಿನ ಈ ಬೆಳವಣಿಗೆ ದೋಸ್ತಿಗೆ ಪೆಟ್ಟು ನೀಡುವುದೇ ಎಂದು ಕಾದು ನೋಡಬೇಕಾಗಿದೆ.ತದನಂತರ ಪಂಚಾಯತ್ ಕಾರ್ಯಲಯದಲ್ಲಿ ಮಾತನಾಡಿದ ಶಾಸಕರು ” ಈ ಕ್ಷೇತ್ರಕ್ಕೆ ನಾನು ಹಲವಾರು ಬಾರಿ ಭೇಟಿ ನೀಡುತ್ತಾ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದೇನೆ ಆದರೆ ಲೋಕಸಭಾ ಸದಸ್ಯರು ಈ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಪರೋಕ್ಷ ಟಾಂಗ್ ನೀಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.

By suddi9

Leave a Reply

Your email address will not be published. Required fields are marked *