ಬಂಟ್ವಾಳ: ಸೇವೆಯೆಂಬುದು ಕೇವಲ ಒಂದು ದಿನದ ತೋರ್ಪಡಿಕೆ ಮಾತ್ರವಲ್ಲ. ಅದು ಸಮಾಜದ ಏಳಿಗೆಗಾಗಿ ನಿರಂತರ ಬೆಳಗುತ್ತಿರುವ ಜ್ಯೋತಿಯಾಗಿರಬೇಕು ಈ ರೀತಿಯ ಸ್ವಾರ್ಥ ರಹಿತ ಸೇವೆಯನ್ನು ಸೇವಾಂಜಲಿಯ ಮೂಲಕ ನಡೆಸುತ್ತಿರುವ ಕೃಷ್ಣ ಕುಮಾರ್ ಪೂಂಜಾರ ಕಾರ್ಯ ಶ್ಲಾಘನೀಯ ಎಂದು ಬಂಟ್ವಾಳ ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ ಹೇಳಿದರು.

ಅವರು ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ನಡೆಸಿಕೊಂಡು ಬರುತ್ತಿರುವ ಭಾರತೀಯ ಜೀವವಿಮಾ ನಿಗಮದ ಆಮಆದ್ಮಿ ಯೋಜನೆಯ ಸದಸ್ಯ ಬಿ.ಮೂಡ ಗ್ರಾಮದ ಪರ್ಲಿಯಾ ನಿವಾಸಿ ಅಬ್ದುಕ್ ಕರೀಂರವರು ಮೃತಪಟ್ಟ ಹಿನ್ನಲೆಯಲ್ಲಿ ಪರಿಹಾರ ಮೊತ್ತ 31 ಸಾವಿರವನನು ಅವರ ಪತ್ನಿ ನಸೀಮಾ ಅವರಿಗೆ ಸೇವಾಂಜಲಿ ಸಭಾಭವನದಲ್ಲಿ ವಿತರಿಸಿ ಮಾತನಾಡಿದರು. ರೋಟರಿಕ್ಲಬ್ ನಿಕಟಪೂರ್ವ ಅಧ್ಯಕ್ಷ ರಿತೇಶ್ ಬಾಳಿಗ ಮಾತನಾಡಿದರು.
ವೇದಿಕೆಯಲ್ಲಿ ಸೇವಾಂಜಲಿಯ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ, ಟ್ರಸ್ಟಿ ಸುರೇಶ್ ರೈ ಪೆಲಪಾಡಿ, ನಾರಯಾಣ ಬೆಳ್ಚಾಡ, ಉಮಾಚಂದ್ರಶೇಖರ್, ದಿವ್ಯಾ ಧನಂಜಯ್, ಜಯರಾಮ ಕಾರಂತ ಉಪಸ್ಥಿತರಿದ್ದರು.
