ಮಂಗಳೂರು: ಸರ್ಕಾರ ಕುಂಟು ನೆಪ ಹೇಳಿ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸಲು ನೋಡ್ತಿದೆ. ಒಂದು ವೇಳೆ ಪ್ರಭಾಕರ್ ಭಟ್ ಅವರನ್ನು ಬಂಧಿಸಿದ್ರೆ ಇಡೀ ರಾಜ್ಯದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಗಲಾಟೆ ಬಗ್ಗೆ ಅಗತ್ಯ ಬಿದ್ರೆ ಪ್ರಧಾನಿ ಗಮನಕ್ಕೂ ತರುತ್ತೇವೆ. ಬಿಜೆಪಿ ಮುಖಂಡ ಸತ್ಯಜಿತ್‌ ಸುರತ್ಕಲ್ ಅವರ ಮನೆಗೆ ರಾತ್ರಿ ಮಹಿಳಾ ಪೊಲೀಸ್ ಇಲ್ಲದೇ ನುಗ್ಗಿ ಬೆದರಿಕೆ ಹಾಕಿದ್ದಾರೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ.bsy pm (1)

ಪ್ರಭಾಕರ್‌ ಭಟ್‌ ಬಂಧಿಸಿ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಸರ್ಕಾರ ಅದಕ್ಕೆ ನೇರ ಹೊಣೆಯಾಗಬೇಕಾಗುತ್ತದೆ. ಪದೇ ಪದೇ ಪೊಲೀಸ್ ಅಧಿಕಾರಿಗಳನ್ನು ವರ್ಗಾಯಿಸುವುದಾಗಿ ಧಮ್ಕಿ ಹಾಕಿ ಸರ್ಕಾರ ಕೆಲಸ ಮಾಡಿಕೊಳ್ಳುತ್ತಿದೆ ಎಂದು ದೂರಿದರು.ಈ ಮನುಷ್ಯ ಜಾಸ್ತಿ ಅಂದ್ರೆ ಎಂಟರಿಂದ ಒಂಬತ್ತು ತಿಂಗಳು ಮಾತ್ರ. ಅವರ ಕಾಲ ಮುಗಿಯಿತು. ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ. ನಿಷೇಧಾಜ್ಞೆ ಮುಂದುವರಿಸುತ್ತಿರುವುದರಿಂದ ಸರ್ಕಾರಕ್ಕೆ ಕಾನೂನು ಪಾಲನೆ ಮಾಡುವ ಯೋಗ್ಯತೆ ಇಲ್ಲ ಅಂತಾ ಗೊತ್ತಾಗುತ್ತದೆ ಎಂದರು.bsy pm (3)

ಶರತ್‌‌ಗೆ ಕಣ್ಣುಗಳನ್ನು ದಾನ ಮಾಡಬೇಕೆಂಬ ಇಚ್ಚೆಯಿತ್ತಂತೆ. ಆದರೆ ಅವರ ತಂದೆ ಈ ಬಗ್ಗೆ ವೈದ್ಯರಲ್ಲಿ ಕೇಳಿದಾಗ ಆತ ಸತ್ತು 20 ಗಂಟೆಗಳಾಗಿವೆ ಎಂದಿದ್ದಾರೆ. ಹೀಗಾಗಿ ಮಗನ ಕೊನೆಯಾಸೆ ಈಡೇರಿಸಲಾಗದೆ ತಂದೆ ತನಿಯಪ್ಪ ಕಣ್ಣೀರಿಡುತ್ತಿದ್ದಾರೆ. ಸಿಎಂ ಬಂದು ಸಮಾವೇಶ ಮಾಡಿ ಹೋದ್ರು. ಸಾವಿನಲ್ಲಿ ರಾಜಕಾರಣ ಮಾಡಿ ಹೋದ ನಿಮಗೆ ಜನರೇ ಪಾಠ ಕಲಿಸಲಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.ಸಿಎಂ ಸಿದ್ದರಾಮಯ್ಯ, ದಕ್ಷಿಣ ಕನ್ನಡದ ಉಸ್ತುವಾರಿ ಕೆಂಪಯ್ಯಗೆ ಕೊಟ್ಟಿದ್ದಾರೆ. ಹಿಂದು ನಾಯಕರನ್ನು ಬಂಧಿಸುತ್ತಾರಂತೆ. ತಾಕತ್ತಿದ್ದರೆ ಬಂಧಿಸಿ, ಕೆಂಪಯ್ಯ ಬೇಡ, ಸಿದ್ರಾಮಯ್ಯರೇ ಬರಲಿ. ಪ್ರಭಾಕರ ಭಟ್ಟರನ್ನು ಬಂಧಿಸಲಿ ಎಂದು ಸವಾಲು ಹಾಕಿದರು.D4S_3259

ಶರತ್ ಕೊಲೆ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸುತ್ತೇವೆ. ರಾಜನಾಥ ಸಿಂಗ್ ಅವರಿಗೆ ಹೇಳಿ ಎನ್‌‌ಐಎ ಕಚೇರಿ ಸ್ಥಾಪಿಸುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.ಸೆಕ್ಷನ್ ಮುಗಿಯಲಿ, ಜಿಲ್ಲೆ ಶಾಂತವಾಗಲಿ, ನಂತರ ಮಂಗಳೂರಿನಲ್ಲಿ ಅತಿದೊಡ್ಡ ಸಮಾವೇಶ ಮಾಡುತ್ತೇವೆ. ಒಂದು ಲಕ್ಷ ಜನರನ್ನು ಸೇರಿಸಿ ಸಿದ್ದರಾಮಯ್ಯರಿಗೆ ತಾಕತ್ತು ತೋರಿಸಬೇಕು. ಪಾರ್ಲಿಮೆಂಟಿನಲ್ಲೂ ಅಗತ್ಯ ಬಿದ್ದರೆ ಪ್ರಸ್ತಾಪ ಮಾಡುತ್ತೇನೆ. ರಾಜಕೀಯ ದೊಂಬರಾಟಕ್ಕೆ ಬಂದ ವೇಣುಗೋಪಾಲ್, ಸಿದ್ರಾಮಯ್ಯರಿಗೆ ಪಾಠ ಕಲಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.

By Suddi9

Leave a Reply

Your email address will not be published. Required fields are marked *