ಸೈಂಟ್ ರೇಮಂಡ್ಸ್ ಕಾಲೇಜು, ವಾಮಂಜೂರು ಇಲ್ಲಿನ ವಿದ್ಯಾರ್ಥಿ ಸಂಘದ ಉದ್ಭಾಟನೆಯನ್ನು ದಿನಾಂಕ 08-07-2017 ರಂದು ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಲಾಯಿತು.
ವಿದ್ಯಾರ್ಥಿ ಸಂಘದ ನಾಯಕ-ನಾಯಕಿಯರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಪರಿ-ಪಾಲನೆ ಮಾಡಬೇಕು. ಈ ಮೂಲಕ ವಿದ್ಯಾರ್ಥಿಗಳು ಜೀವನದಲ್ಲಿ ನಾಯಕತ್ವ ಗುಣವನ್ನು ವಿದ್ಯಾರ್ಥಿ ಜೀವನದಲ್ಲಿಯೇ ಬೆಳೆಸಿಕೊಳ್ಳಬೇಕು ಎಂದು ಮುಖ್ಯ ಸಚೇತಕ ಐವನ್ ಡಿ’ಸೋಜಾ ಇವರು ಸೈಂಟ್ ರೇಮಂಡ್ಸ್ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಸಂಘ ಹಾಗೂ ಇತರ ಸಂಘಗಳನ್ನು ಉದ್ಭಾಟನೆಮಾಡುವ ಮೂಲಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ತನ್ನ ಕಾಲೇಜಿನ ದಿನಗಳಲ್ಲಿ ನಾನು ಒಬ್ಬ ನಾಯಕನಾಗಿದ್ದ ಕಾರಣ ಈಗ ಈ ಮಟ್ಟದ ವರೆಗೆ ಬೆಳೆಯಲು ಸಾಧ್ಯವಾಯಿತು ಎಂಬುದನ್ನು ತಿಳಿಸಿದರು.??????????
ಪ್ರಾಂಶುಪಾಲರದ ಭಗಿನಿ ಸಗಯಾ ಸೆಲ್ವಿ ಇವರು ವಿದ್ಯಾರ್ಥಿಗಳಿಗೆ ಪ್ರಮಾಣವಚನವನ್ನು ಭೋಧಿಸಿದರು. ಸ್ಥಳೀಯ ಮಾಜಿ ಕರ್ಪೋರೇಟರಾದ ಶ್ರೀಮತಿ ಮೀರಾ ಆಶೋಕ್, ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಕೌನ್ಸಿಲರಾದ ಫಾ|ಜೋಸೆಫ್ ಕಾರ್ಡೋಜಾ, ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀಮತಿ ಡಾ| ಸುಜನಾ, ಶಿಕ್ಷಕ್-ರಕ್ಷಕ್ ಸಂಘದ ಉಪಾಧ್ಯಾಕ್ಷೆ ಶ್ರೀಮತಿ ತೆಲ್ಮಾ ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಘದ ಅಧ್ಯಕ್ಷನಾದ ಮೊಹಮ್ಮದ್ ಮುಫೀಜ್ ಉಪಧ್ಯಾಕ್ಷನಾದ ರೋಹಿತ್ ಕುಮಾರ್, ವಿಪಕ್ಷ ನಾಯಕಿ ನಜ್‍ನಿನ್ ಹಾಗೂ ಇತರ ಸಂಘದ ನಾಯಕ-ನಾಯಕಿಯರು ಉಪಸ್ಥಿತರಿದ್ದರು. ವಾಣಿಜ್ಯ ಉಪನ್ಯಾಸಕಿ ಕುಮಾರಿ ಮೆಲಿಟಾ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಜಕೀರಾ ವಂದಿಸಿದರು.

By suddi9

Leave a Reply

Your email address will not be published. Required fields are marked *