ಮಂಗಳೂರು: ಹಿಂದೂ ಸಮಾಜದ ಮೇಲಾಗುತ್ತಿರುವ ನಿರಂತರ ಹಲ್ಲೆಗಳನ್ನು ವಿರೋಧಿಸಿ ಹಿಂದೂ ಸಂರಕ್ಷಣಾ ಸಮಿತಿ ವತಿಯಿಂದ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಯಿತು. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗುರುಪುರ ಶ್ರೀ ವಜ್ರದೇಹಿ ಸಂಸ್ಥಾನದ ಪೂಜ್ಯ ಸ್ವಾಮೀಜಿಗಳಾದ ಶ್ರೀ ರಾಜಶೇಖರಾನಂದರು ಇತ್ತೀಚೆಗೆ ನಿರಂತರವಾಗಿ ಹಿಂದೂ ಸಮಾಜದ ಮೇಲೆ ಹಲ್ಲೆಗಳಾಗುತ್ತಿದ್ದು ಸಂಘಪರಿವಾರದ ಕಾರ್ಯಕರ್ತರ ಮೇಲೆ ವಿನಾಕಾರಣ ಹಲ್ಲೆ ನಡೆಯುತ್ತಿದ್ದರು ರಾಜ್ಯ ಸರಕಾರ ಕಣ್ಮುಚ್ಚಿ ಕುಳಿತಿದೆಯೇ ಎಂದು ಪ್ರಶ್ನಿಸಿದರು. ಜೊತೆಗೆ ಕೇವಲ ಎರಡು ಸ್ಥಾನಗಳಲ್ಲಾದ ಗಲಭೆಗಾಗಿ ಇಡೀ ಜಿಲ್ಲೆಯ ಮೇಲೆ ಸೆಕ್ಷನ್ ಹೇರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ರಾಜಕೀಯದಾಟಕ್ಕಾಗಿ ಜಿಲ್ಲೆಯ ಹಿತಾಸಕ್ತಿಯನ್ನು ಬಲಿ ಕೊಡಲಾಗುತ್ತಿದ್ದು, ವಿನಾಕಾರಣ ಹಿಂದುಗಳ ಮೇಲಾಗುತ್ತಿರುವ ದೌರ್ಜನ್ಯವನ್ನು ನೋಡಿಯೂ ರಾಜ್ಯ ಸರಕಾರ ಕಣ್ಮುಚ್ಚಿ ಕುಳಿತಿದೆ. ಜೊತೆಗೆ ಶರತ್ ಸಾವಿನ ವಿಚಾರವನ್ನು ಮುಚ್ಚಿಟ್ಟು ಆತನ ಕೊನೆಯಾಸೆಯನ್ನು ಈಡೇರಿಸಲು ಆಗದಂತೆ ಮಾಡಿರುವುದು ಖಂಡನಾರ್ಹ ಎಂದರು ಜೊತೆಗೆ ದ.ಕ ದಲ್ಲಿ ಆಗುತ್ತಿರುವ ಗಲಭೆಗಳ ಕುರಿತು ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಸುವಂತೆ ರಾಜ್ಯಪಾಲರ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ ಆರ್ ಶೆಟ್ಟಿ ಅಡ್ಯಾರ್‍ಪದವು ,ಉಪಾಧ್ಯಕ್ಷ ಸುಶಾಂತ್ ಅಮಿನ್ ,ಶ್ರುತಿನ್ ಶೆಟ್ಟಿ ಕಡೆಶಿವಾಲ್ಯ ,ಕಾರ್ತಿಕ್ ಬರ್ಕೆ, ಗಣೇಶ್ ಕುಲಾಲ್ ಕೆದಿಲ ಪ್ರಶಾಂತ್ ಗುರುಪುರ ಉಪಸ್ಥಿತರಿದ್ದರು
