ಬಂಟ್ವಾಳ: ತಾಲೂಕಿನ ಪೆರಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮ ಸಭೆ ಸರಕಾರಿ ಪ್ರಾಥಮಿಕ ಶಾಲೆ ಪೆರಾಜೆ ಇಲ್ಲಿ ನಡೆಯಿತು. ಸಭೆಯಲ್ಲಿ ಪೆರಾಜೆ ಶ್ರೀರಾಮ ಚಂದ್ರಪುರ ಮಠದ ಸಮೀಪ ವೈನ್ ಶಾಪ್ ತಲೆ ಎತ್ತುವ ಬಗ್ಗೆ ಹುನ್ನಾರ ನಡೆಯುತ್ತಿದ್ದು, ಇದಕ್ಕೆ ಗ್ರಾ.ಪಂ. ಯಾವುದೇ ರೀತಿಯ ಅವಕಾಶ ನೀಡಬಾರದು ಎಂದು ಗ್ರಾಮಸ್ಥರು ಹೇಳಿದರು. ಇದಕ್ಕೆ ಪಂ.ನ ಎಲ್ಲಾ ಸದಸ್ಯರು ಸೇರಿ ಒಮ್ಮತದಲ್ಲಿ ಯಾವುದೇ ರೀತಿಯ ಮದ್ಯ ಮಾರಾಟಕ್ಕೆ ಪ್ರಸ್ತುತ ಹುನ್ನಾರ ನಡೆಸುತ್ತಿರುವ ಜಾಗ ಅಲ್ಲದೇ ಪೆರಾಜೆ ಗ್ರಾಮದಲ್ಲಿಯೇ ಎಲ್ಲಯೂ ಕೂಡ ಅವಕಾಶ ನೀಡುವುದಿಲ್ಲ ಎನ್ನುವ ನಿರ್ಣಯವನ್ನು ಕೈಗೊಳ್ಳಲಾಯಿತು. ಪೆರಾಜೆ ಗ್ರಾಮದ ಕೆಲವು ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವಂತೆ ಇಂಜಿನಿಯರ್‍ಗಳಿಗೆ ತಿಳಿಸಲಾಯಿತು. ಶಾಲಾ ಮಕ್ಕಳಿಗೆ ಇನ್ನೂ ಕೂಡ ಪಠ್ಯ ಪುಸ್ತಕ ಸಿಗದೇ ಮಕ್ಕಳು ತೊಂದರೆಗೊಳಪಟ್ಟಿದ್ದಾರೆ ಎಂದು ಶಿಕ್ಷಣ ಇಲಾಖೆಯ ಬಗ್ಗೆ ಆರೋಪ ವ್ಯಕ್ತ ಪಡಿಸಿದರು.DSC_3696
ಜಿ.ಪಂ ಸದಸ್ಯೆ ಮಂಜುಳಾ ಮಾಧವ ಮಾವೆ ಸಭೆಗೆ ಆಗಮಿಸಿ ಮಾತನಾಡಿದ ಅವರು ಇಲಾಖಾಧಿಕಾರಗಳಿಗಿಂತ ಗ್ರಾಮದ ಹಿರಿಯ ವ್ಯಕ್ತಿಗಳಿಗೆ ಸಾಕಷ್ಟು ಅನುಭವವಿದೆ. ಹಾಗಾಗೀ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. ಗ್ರಾಮ ಸಭೆಯಲ್ಲಿ ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆ ಮುಖ್ಯವಾಗಿರುತ್ತದೆ. ಕಾನೂನಿಗೆ ವಿರೋಧವಾಗಿರುವಂತಹ ಯಾವುದೇ ಕೆಲಸಗಳನ್ನು ಗ್ರಾಮದಲ್ಲಿ ಮಾಡುವುದಿಲ್ಲ. ಪ್ರತಿ ಮನೆಯವರು ಸ್ವಚ್ಚತೆಯ ಬಗ್ಗೆ ಹೆಚ್ಚು ನಿಗಾ ವಹಿಸಿದರೆ ಸ್ವಚ್ಚ ಗ್ರಾಮವಾಗುದಕ್ಕೆ ಹೆಚ್ಚು ಅನುಕೂಲವಾಗುತ್ತದೆ, ಗ್ರಾಮ ಸಭೆಯಲ್ಲಿ ಆರೋಗ್ಯಕರ ಚರ್ಚೆ ನಡೆಯಬೇಕು ಎಂದರು. ಗ್ರಾ.ಪಂ. ಅಧ್ಯಕ್ಷೆ ಪುಷ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನೊಡೆಲ್ ಅಧಿಕಾರಿ ಸಿಡಿಪಿಓ ಸುಧಾ ಜೋಷಿ ಭಾಗವಹಿಸಿದ್ದರು.ತಾ.ಪಂ. ಸದಸ್ಯೆ ಮಂಜುಳಾ ಕುಶಾಲ, ಗ್ರಾ.ಪಂ. ಉಪಾಧ್ಯಕ್ಷೆ ಗುಲಾಬಿ, ಮಾಜಿ ತಾ.ಪಂ. ಸದಸ್ಯ ಕುಶಲ ಎಮ್, ಗ್ರಾ.ಪಂ. ಸದಸ್ಯರಾದ ತಿಮ್ಮಪ್ಪ ಗೌಡ, ನೀಲಯ್ಯ ಪೂಜಾರಿ, ಮೋಹಿನಿ, ಇಂದಿರಾ, ಉಮ್ಮರ್, ಪ್ರಮುಖರಾದ ಶ್ರೀಕಾಂತ ಆಳ್ವ, ಅಪ್ರಾಯ ಬಿ.ಪೈ, ಬಿ.ಟಿ. ನಾರಾಣ ಭಟ್, ಎಸ್. ಉಮ್ಮರ್, ಜನಾರ್ಧನ ಪೆರಾಜೆ ಮತ್ತಿತರರು ಉಪಸ್ಥಿತರಿದ್ದರು.ಪಿಡಿಓ ಶಂಭು ಶರ್ಮ ಸ್ವಾಗತಿಸಿ, ಗ್ರಾ.ಪಂ. ಸದಸ್ಯ ಉಮೇಶ್ ಪಿ ವಂದಿಸಿದರು.

By Suddi9

Leave a Reply

Your email address will not be published. Required fields are marked *