ಬಂಟ್ವಾಳ : ನೇರಳಕಟ್ಟೆ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರದ ವತಿಯಿಂದ ಉಚಿತ ಸೈಕಲ್, ಸಮವಸ್ತ್ರ, ಶೂ ವಿತರಣೆಗೆ ಹಾಗೂ ಶಾಲಾಭಿವೃದ್ದಿ ಸಮಿತಿ ಮತ್ತು ಪೋಷಕರ ಸಭೆಯು ಇತ್ತೀಚೆಗೆ ಶಾಲೆಯಲ್ಲಿ ನಡೆಯಿತು. Neralakatte School
ನೆಟ್ಲಮುಡ್ನೂರು ಗ್ರಾ.ಪಂ. ಅಧ್ಯಕ್ಷೆ ವಿಜಯ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯೆ ಮಂಜುಳಾ ಮಾವೆ ಉದ್ಘಾಟಿಸಿದರು. ತಾ.ಪಂ. ಸದಸ್ಯ ಹಾಜಿ ಆದಂ ಕುಂಞÂ ಪಾಟ್ರಕೋಡಿ, ನೆಟ್ಲಮುಡ್ನೂರು ಗ್ರಾ.ಪಂ. ಉಪಾಧ್ಯಕ್ಷೆ ರೇವತಿ, ಸದಸ್ಯರುಗಳಾದ ಕೆ. ಶ್ರೀಧರ ರೈ, ಡಿ. ತನಿಯಪ್ಪ ಗೌಡ, ಲತೀಫ್ ನೇರಳಕಟ್ಟೆ, ಕೆದಿಲ ಗ್ರಾ.ಪಂ. ಉಪಾಧ್ಯಕ್ಷೆ ಬೇಬಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ನೇರಳಕಟ್ಟೆ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರೋಹಿತಾಶ್ವ, ಉಪಾಧ್ಯಕ್ಷೆ ಭಾರತಿ, ಸದಸ್ಯರುಗಳಾದ ಎನ್.ಕೆ. ಅಬೂಬಕ್ಕರ್, ಅಬ್ದುರ್ರಹ್ಮಾನ್ ಪರ್ಲೊಟ್ಟು, ಶೀನ ನಾೈಕ, ಮೈಮೂನಾ, ಝಾಹಿದಾ, ಜಯಂತಿ, ಶಿಕ್ಷಕರುಗಳಾದ ಜ್ಯೋತಿ, ರೇಶ್ಮಾ, ಜ್ಯೂಲಿಯೆಟ್, ಸೇಸಪ್ಪ ನಾೈಕ ಮೊದಲಾದವರು ಉಪಸ್ಥಿತರಿದ್ದರು. ಶಾಲಾಭಿವೃದ್ದಿ ಸಮಿತಿಗೆ ತೆರವಾದ ಸದಸ್ಯರುಗಳ ಸ್ಥಾನಕ್ಕೆ ಹಂಝ ನೇರಳಕಟ್ಟೆ, ಆಸಿಫ್ ನೇರಳಕಟ್ಟೆ, ನಂದಿತಾ, ಸಲೀಕ, ರುಕ್ಮಿಣಿ ಅವರನ್ನು ನೂತನ ಸದಸ್ಯರನ್ನಾಗಿ ನೇಮಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಇಂದಿರಾ ಐ. ಸ್ವಾಗತಿಸಿ, ಸಹ ಶಿಕ್ಷಕಿ ಗೀತಾ ಕುಮಾರಿ ವಂದಿಸಿದರು. ಸುಧಾಕರ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *