ಬಂಟ್ವಾಳ :ಬಿ.ಸಿ.ರೋಡಿನ ಉದಯ ಲಾಂಡ್ರಿಗೆ ನುಗ್ಗಿ ಮಾರಣಾಂತಿಕ ಹಲ್ಲೆಗೊಳಗಾಗಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಆರ್ ಎಸ್ ಎಸ್   ಕಾರ್ಯಕರ್ತ ಶರತ್ ಅವರು ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಂಜೆ ಕೊನೆಯುಸಿರೆಳೆದಿದ್ದಾರೆ.ಸಜೀಪ ಕಂದೂರು ನಿವಾಸಿಯಾಗಿರುವ ತನಿಯಪ್ಪ ಅವರ ಏಕೈಕ ಪುತ್ರ ಶರತ್ ಅವರನ್ನು ಮಂಗಳವಾರ ರಾತ್ರಿ 9.30 ರ  ಸುಮಾರಿಗೆ ಬಿ.ಸಿ.ರೋಡಿನ ತನ್ನ ಅಂಗಡಿಯಲ್ಲಿದ್ದ ವೇಳೆ ಬೈಕ್ ನಲ್ಲಿ ಬಂದ ಮೂವರು  ದುಷ್ಕರ್ಮಿಗಳು ಅಂಗಡಿಗೆ ನುಗ್ಗಿ ತಲವಾರು ದಾಳಿ ನಡೆಸಿ ಮಾರಣಾಂತಿಕವಾಗಿ ಹಲ್ಲೆಗೈದಿದ್ದರು.

RSS-activist-Sharath-Madiwala-who-was-stabbed-assailants-at-Bantwal-dies-in-Mangalore-indialivetoday

ತದನಂತರ ಕಳೆದ ನಾಲ್ಕುದಿನಗಳಿಂದ ಮಂಗಳೂರಿನ ಎ.ಜೆ‌.ಆಸ್ಪತ್ರೆಯಲ್ಲಿ  ಜೀವನ್ಮರಣ ಹೋರಾಟ ನಡೆಸುತ್ತಿದ್ದ ಶರಣ್ ಕೊನೆಗೂ ತನ್ನ ಜೀವ ಉಳಿಸಿಕೊಳ್ಳಲಾಗದೆ ಇಹಲೋಕ ತ್ಯಜಿಸಿದ್ದಾನೆ.ಇವರ ಸಾವನ್ನು ಆಸ್ಪತ್ರೆ ಮೂಲಗಳು ದ್ರಢ ಪಡಿಸಿದೆ. ಅತ್ಯಂತ ಶ್ರಮಜೀವಿಯಾಗಿದ್ದ ಶರತ್ ಸ್ಥಳಿಯವಾಗಿಯೂ ಜನಾನುರಾಗಿದ್ದರು.ಯಾರ ತಮನಟೆ,ರಗಳೆಗೆ ಹೋಗದ ಶರತ್ ಸ್ನೇಹಮಯಿಯಾಗಿದ್ದ,ಯಾರೊಂದಿಗೂ ವಿರೋಧವನ್ನು ಕಟ್ಟಿಕೊಂಡಿರಲಿಲ್ಲ,ತನಿಯಪ್ಪ ಅವರ ಮೂವರು ಮಕ್ಕಳ ಪೈಕಿ ಏಕೈಕ ಪುತ್ರನಾಗಿದ್ದು,ಮನೆಯ ಆಧಾರ ಸ್ತಂಭವಾಗಿದ್ದು,ಅದೀಗ ಕಳಚಿ ಬಿದ್ದಿದೆ.ಒರ್ವಸಹೋದರಿಗೆ ವಿವಾಹವಾಗಿದ್ದರೆ ,ಇನ್ನೊರ್ವಳು ಲಾಂಡ್ರಿ ಅಂಗಡಿಯಲ್ಲಿದ್ದು,ಸಹಕರಿಸುತ್ತಿದ್ದಳು,ಶರತ್ ಅವರ ಈಅಕಾಲಿಕ ಸಾವು ಮನೆ ಮಂದಿ ಮಾತ್ರವಲ್ಲ ಸ್ಥಳೀಯವಾಗಿಯೂ  ದುಖ;ದ ಕಡಲಲ್ಲಿ ತೇಲಿಸಿದೆ.

ಬಿ.ಸಿ.ರೋಡ್ ಸಹಿತ ಸಜೀಪ ಪರಿಸರದಲ್ಲೂ ಶರತ್ ಸಾವಿನಿಂದ ಸ್ನಶಾನ ಮೌನ ಅವರಿಸಿದೆ.ಇಂದು (ಶನಿವಾರ) ಬೆಳಿಗ್ಗೆ 10 ಗಂಟೆಗೆ ಬಿ.ಸಿ.ರೋಡಿನಲ್ಲಿ ಶರತ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ವೀಕ್ಷಣೆಗೂ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.ಶರತ್ ಸಾವಿನ ಹಿನ್ನಲೆಯಲ್ಲಿ ಕೊಲೆಯತ್ನ ಪ್ರಕರಣ ಇದೀಗ ಕೊಲೆ ಪ್ರಕರಣವಾಗಿ ತಿರುವುಪಡೆದು ಕೊಂಡಿದ್ದು, ಬಂಟ್ವಾಳ ನಗರ ಠಾಣೆಯಲ್ಲಿ ಕೊಲೆ ಕೇಸು ದಾಖಲಾಗಿದೆ ಎಂದು ತಿಳಿದು ಬಂದಿದೆ.ಸಾವಿನ ಸುದ್ದಿ ಹರಡುತ್ತಿದ್ದಂತೆ ಪೊಲೀಸರು ಬಂದೋಬಸ್ತನ್ನು ಕೂಡ ಬಿಗಿ ಗೊಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *