ಬಂಟ್ವಾಳ: ಅಂತಾರಾಷ್ಟೀಯ ಲಯನ್ಸ್ ಸಂಸ್ಥೆ ಜಿಲ್ಲೆ 317ಡಿ ಲಯನ್ಸ್ ಕ್ಲಬ್ ಬಂಟ್ವಾಳದ ಪದಗ್ರಹಣ ಸಮಾರಂಭ ಜುಲೈ 2 ಭಾನುವಾರ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಸಂಜೆ 6.30ಕ್ಕೆ ನಡೆಯಲಿದೆ.
2017-18ರ ನೂತನ ಅಧ್ಯಕ್ಷರಾಗಿ ಜಗದೀಶ ಎಡಪಡಿತ್ತಾಯ ಕಾರ್ಯದರ್ಶಿಯಾಗಿ ರಾಮಕೃಷ್ಣ ರಾವ್. ಬಿ ಕೋಶಾಕಾರಿಯಾಗಿ ರೋಹಿತಾಶ್ವ.ಎಂ ಮತ್ತು ಲಯನೆಸ್ ಕ್ಲಬ್ ಅಧ್ಯಕ್ಷೆಯಾಗಿ ಚಿತ್ರಾ ಎಡಪಡಿತ್ತಾಯ ಕಾರ್ಯದರ್ಶಿಯಾಗಿ ಸುಜಾತ ರವಿಶಂಕರ್ ಹಾಗೂ ಕೋಶಾಕಾರಿಯಾಗಿ ವಸಂತಿ ಲೋಕನಾಥ ಶೆಟ್ಟಿ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

29bhjagadeesh ಪದಗ್ರಹಣ ಅಕಾರಿಯಾಗಿ ಮಾಜಿ ಲಯನ್ಸ್ ಜಿಲ್ಲಾ ಗವರ್ನರ್ ಹಾಗೂ ಕನ್ನಡ ಸಾಹಿತ್ಯ ಪರಿಷತ್‍ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಪ್ರಮಾಣ ವಚನ ಬೋಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ಣಾಟಕ ಬ್ಯಾಂಕ್ ಮಾಜಿ ಅಧ್ಯಕ್ಷ ಅನಂತಕೃಷ್ಣ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

By Suddi9

Leave a Reply

Your email address will not be published. Required fields are marked *