ಬಂಟ್ವಾಳ: ಸುಮಾರು ಒಂದು ತಿಂಗಳು ಕೃತಕ ಕಾವು ಕೊಟ್ಟ ಬಳಿಕ ಹೊರಬಂದವು ಹೆಬ್ಬಾವಿನ ಹದಿನೈದು ಮರಿಗಳು. ಇವೀಗ ಆರೋಗ್ಯವಾಗಿದ್ದು, ಪಶ್ಚಿಮ ಘಟ್ಟದ ಸುರಕ್ಷಿತ ಅರಣ್ಯ ಪ್ರದೇಶದಲ್ಲಿ ಸ್ವತಂತ್ರವಾಗಿ ವಿಹರಿಸುತ್ತಿವೆ.23bhsnake3

ಒಂದು ತಿಂಗಳ ಹಿಂದೆ ಬಂಟ್ವಾಳ ಸಮೀಪದ ಬಡಗುಂಡಿ ಎಂಬಲ್ಲಿ ದೊರಕಿದ ಹೆಬ್ಬಾವಿನ ಮೊಟ್ಟೆಗಳನ್ನು ರಕ್ಷಿಸಿ, ಅದರಿಂದ ಮರಿಗಳು ಹೊರಬಂದ ಕತೆ ಇದು. ಬಡಗುಂಡಿಯಲ್ಲಿ ನಿವೇಶನ ನಿರ್ಮಾಣ ವೇಳೆ ಅಲ್ಲಿನ ಕೆಲಸಗಾರರಿಗೆ ಹೆಬ್ಬಾವಿನ ಮೊಟ್ಟೆಗಳು ಕಂಡುಬಂದವು. ಕೂಡಲೇ ಅವುಗಳನ್ನು ಉರಗತಜ್ಞ ಸ್ನೇಕ್ ಕಿರಣ್ ಮತ್ತು ತಂಡದ ಸದಸ್ಯರಾದ ನಿತ್ಯಪ್ರಕಾಶ್ ಬಂಟ್ವಾಳ್, ಶ್ರೀಪ್ರಸಾದ್, ಅಜಯ್, ಥೋಮಸ್, ಅವಿನ್ ಅವರಿಗೆ ಒಪ್ಪಿಸಿದರು. ಸ್ನೇಕ್ ಕಿರಣ್ ಇದನ್ನು ಸುಮಾರು ಒಂದು ತಿಂಗಳು ಕೃತಕವಾಗಿ ಕಾವು ಕೊಡುವ ವ್ಯವಸ್ಥೆ ಮೂಲಕ ಸಂರಕ್ಷಿಸಿದರು. 23bhsnake1ಮೊಟ್ಟೆಯೊಳಗಿನಿಂದ ಸುರಕ್ಷಿತವಾಗಿ ಹೆಬ್ಬಾವಿನ ಮರಿಗಳು ಹೊರಗೆ ಬಂದಿದ್ದು, ಆ ಮರಿಗಳನ್ನು ಸುಮಾರು 10 ದಿನಗಳ ಕಾಲ ಆರೈಕೆ ಮಾಡಿ ಅರಣ್ಯ ಇಲಾಖೆಯ ಆರ್.ಎಫ್.ಬಿ. ಸುರೇಶ್, ಡಿ.ಆರ್.ಎಫ್. ಲಕ್ಷ್ಮೀನಾರಾಯಣ ಮತ್ತು ಡಿ.ಆರ್.ಎಫ್. ಅನಿಲ್ ಅವರ ಸಹಾಯದೊಂದಿಗೆ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶಗಳಿಗೆ ಬಿಡಲಾಯಿತು.

By Suddi9

Leave a Reply

Your email address will not be published. Required fields are marked *