ಮೂಡುಬಿದರೆ: ಇಲ್ಲಿನ ತೋಡಾರು ಡಾ.ಎಂ.ವಿ.ಶೆಟ್ಟಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿ.ಟಿ.ಯು ನಡೆಸಿದ ಪ್ರಥಮ ಮತ್ತು ದ್ವಿತೀಯ ಬಿಇ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ 198 ವಿದ್ಯಾರ್ಥಿಗಳಲ್ಲಿ 141 ಮಂದಿ ಪಾಸಾಗಿ ಶೇ 71.2 ಫಲಿತಾಂಶ ದಾಖಲಿಸಿದ್ದು ವಿದ್ಯಾರ್ಥಿಗಳಾದ ಅಭಿಷೇಕ್ ಶೆಟ್ಟಿ ಶೇ 88 ಮತ್ತು ಮುತ್ತುರಾಜ್ ಶೇ.84 ಅಂಕಗಳನ್ನು ಪಡೆದಿರುತ್ತಾರೆ.
ಮೆಕ್ಯಾನಿಕ್ ವಿಭಾಗದಲ್ಲಿ (21 ಅತ್ಯುನ್ನತ ಶ್ರೇಣಿ ಮತ್ತು 33 ಪ್ರಥಮ ದರ್ಜೆ ) ಶೇ 71.69 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಇನ್ಫಾರ್ಮೇಷನ್ ಸಾಯನ್ಸ್ ವಿಭಾಗದಲ್ಲಿ ಶೇ 71.4, ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದಲ್ಲಿ (04 ಅತ್ಯುನ್ನತ ಮತ್ತು 11 ಪ್ರಥಮ) ಶೇ.76.9 ಹಾಗೂ ಕಂಪ್ಯೂಟರ್ ಸಾಯನ್ಸ್ ವಿಭಾಗದಲ್ಲಿ (14 ಅತ್ಯುನ್ನತ ಶ್ರೇಣಿ ಮತ್ತು 14 ಪ್ರಥಮ ದರ್ಜೆ ) ಶೇ 76.1 ಹಾಗೂ ಎಲೆಕ್ಟ್ರಿಕಲ್ಸ್ ಎಂಡ್ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ 06 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ

By Suddi9

Leave a Reply

Your email address will not be published. Required fields are marked *