ಮೂಡುಬಿದರೆ: ಐ ಎಸ್ ಇ-ಎಸ್ ಆರ್ ಎಂ ವಿವಿ ಮತ್ತು ತೋಡಾರು ಡಾ. ಎಂ.ವಿ.ಶೆಟ್ಟಿ ತಾಂತ್ರಿಕ ಕಾಲೇಜಿನ ಸಹಯೋಗದಲ್ಲಿ ನೀರು ನಿರ್ವಹಣೆ ಕುರಿತು ಕಾಲೇಜಿನ ಸೆಮಿನಾರ್ ಹಾ ಲ್ ನಲ್ಲಿ ಒಂದು ವಾರಗಳ ಕಾಲ ನಡೆದ ತರಬೇತಿ ಕಾರ್ಯಕ್ರಮವು ಶನಿವಾರ ಸಮಾರೋಪಗೊಂಡಿತು.
ನೀರು ನಿರ್ವಹಣೆ ತರಬೇತಿ ಸಮಾರೋಪ ಸಮಾರಂಭದಲ್ಲಿ ಡಾ.ಗಣೇಶ್ ಮಾತನಾಡಿದರು.
ಬಂಟಕಲ್ ಎಸ್ಎಂ ವಿ ಐ ಟಿ ಯ ಡಾ.ಗಣೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕರಾವಳಿ ಪ್ರದೇಶದಲ್ಲಿ ತಾಂತ್ರಿಕ ಸಂಶೋಧನೆ( ರಿಸರ್ಚ್ ಟೆಕ್ನಿಕಲ್ ಇನ್ ಕೋಸ್ಟಲ್ ಏರಿಯಾ)ದ ಬಗ್ಗೆ ಮಾತನಾಡಿ ನೀರು ನಿರ್ವಹಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಯುವ ಪೀಳಿಗೆ ಕಾಲೇಜು ಮಟ್ಟದಲ್ಲಿಯೇ ಅದನ್ನು ತಿಳಿದುಕೊಂಡು ಹೊಸ ಹೊಸ ಸಂಶೋಧನೆಗಳಿಗೆ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಆಳ್ವಾಸ್ ತಾಂತ್ರಿಕ ಕಾಲೇಜಿನ ದುರ್ಗಾಪ್ರಸಾದ್ ಉಪಸ್ಥಿತರಿದ್ದರು. ಪ್ರೊ.ವಿನೋದ್ ಕುಮಾರ್ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಸಂದೀಪ್ ಜೆ.ನಾಯಕ್ ಒಂದು ವಾರಗಳ ಕಾಲ ನಡೆದ ಕಾರ್ಯಕ್ರಮಗಳ ವರದಿಯನ್ನು ಮಂಡಿಸಿದರು. ಶಿಬಿರಾರ್ಥಿಗಳು ಅನಿಸಿಕೆಗಳನ್ನು ಹಂಚಿಕೊಂಡರು. ನಾಗರಾಜ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಶಶಿರೇಖಾ ವಂದಿಸಿದರು.
ಆರು ದಿನಗಳ ಕಾಲ ನಡೆದ ತರಬೇತಿಯಲ್ಲಿ ಮಂಗಳೂರು ಬಿಐಟಿ ಕಾಲೇಜಿನ ಪ್ರೊ.ಪಾಲಕ್ಷಪ್ಪ, ಎಸ್ಐಟಿಕೆಯ ಪ್ರೊ.ಎಂ.ಕೆ.ನಾಗರಾಜ್, ಡಾ.ಸಂದೀಪ್.ಜೆ.ನಾಯಕ್, ನಿಟ್ಟೆ ತಾಂತ್ರಿಕ ಮಹಾ ವಿದ್ಯಾಲಯದ ಪ್ರೊ.ಎಸ್.ಕೆ. ಮಹಾದೇವಗೌಡ, ಸುರತ್ಕಲ್ ಎನ್.ಐ.ಟಿ.ಕೆ ಡಾ.ಜಿ.ಎನ್.ದ್ವಾರಕೀಶ್, ಡಾ.ರಮೇಶ್, ಎನ್ಐಟಿಕೆಯ ಡಾ.ಪಾರೇಶ್ಚಂದ್ರ ಡಾ.ಬಿ.ಎಂ.ದೊಡ್ಡಮನಿ, ಬಂಟಕಲ್ ಎಸ್ಎಂವಿಐಟಿಯ ಡಾ.ಗಣೇಶ್, ಎಂ.ಆರ್.ಪಾಟೀಲ್ ಸಂಪನ್ಮೂಲ ಭಾಗವಹಿಸಿದರು.

