ಬಂಟ್ವಾಳ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ದಿನಾಂಕ 21.06.2017ರಂದು ಆಚರಿಸಲಾಯಿತು.
ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ಪತಂಜಲಿ ಯೋಗ ಸಂಸ್ಧಾನದ ಸದಸ್ಯರಾದ ಶ್ರೀ ಪ್ರದೀಪ್ ಮತ್ತು ಕಾರ್ಯಕರ್ತರಾದ ಶ್ರೀ ಪ್ರಭಾಕರ್ ಇವರು ಯೋಗದಿಂದ ಮಾನಸಿಕ, ಶಾರೀರಿಕ ನೆಮ್ಮದಿ ದೊರೆಯುತ್ತದೆ.ಮಕ್ಕಳಲ್ಲಿ ಏಕಾಗ್ರತೆ, ಸ್ಮರಣಶಕ್ತಿ ಹೆಚ್ಚುತ್ತದೆ ಎಂದು ಯೋಗದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಕೆಲವು ಯೋಗಾಸನಗಳನ್ನು ಮಾಡಿಸಿದರು.
ಶ್ರೀರಾಮ ವಿದ್ಯಾಕೇಂದ್ರದ ಮಾರ್ಗದರ್ಶಕರಾದ ಮಾತೃಸ್ವರೂಪಿ ಶ್ರೀಮತಿ ಕಮಲಾ ಪ್ರಭಾಕರ್ ಭಟ್ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಸತೀಶ್ ಭಟ್, ಹಾಗೂ ಮುಖ್ಯೋಪಾಧ್ಯಾಯರಾದ ಶ್ರೀ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರೂಪಕಲಾ ಮಾತಾಜಿ ನಿರೂಪಿಸಿ, ಪ್ರೇಮ ಮಾತಾಜಿ ಸ್ವಾಗತಿಸಿ, ವೇದಾವತಿ ಮಾತಾಜಿ ವಂದಿಸಿದರುIMG-20170621-WA0005

By suddi9

Leave a Reply

Your email address will not be published. Required fields are marked *