ವಿಟ್ಲ: ಚಂದಳಿಕೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಎಲ್ಲಾ ಮಕ್ಕಳಿಗೆ ಚಂದಳಿಕೆ ವಿದ್ಯಾ ವರ್ದಕ ಸಂಘದ ವತಿಯಿಂದ ಉಚಿತವಾಗಿ ಬರೆಯುವ ಪುಸ್ತಕಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾ ವರ್ಧಕ ಸಂಘದ ಅಧ್ಯಕ್ಷೆ ಭವಾನಿ ರೈ ಕೊಲ್ಯ, ಗೌರವಾಧ್ಯಕ್ಷ ಅಮ್ಮು ಶೆಟ್ಟಿ, ಇತರ ಪದಾಧಿಕಾರಿಗಳು ಮತ್ತು ಸದಸ್ಯರು, ಬಿ ಆರ್ ಪಿ ನಾರಾಯಣ ಗೌಡ, ಪಟ್ಟಣ ಪಂಚಾಯತ್ ಸದಸ್ಯ ಮಂಜುನಾಥ ಕಲ್ಲಕಟ್ಟ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚೆನ್ನಪ್ಪ ಪೂಜಾರಿ ಮತ್ತು ಸದಸ್ಯರು ಪ್ರಭಾರ ಮುಖ್ಯ ಶಿಕ್ಷಕಿ ಪುಷ್ಪಾವತಿ, ಸಹಶಿಕ್ಷಕರು, ಮಕ್ಕಳು ಮತ್ತು ಪೋಷಕರು ಉಪಸ್ಥಿತರಿದ್ದರು. ವಿದ್ಯಾ ವರ್ದಕ ಸಂಘದ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ ಚಂದಳಿಕೆ ಕಾರ್ಯಕ್ರಮ ಸಂಯೋಜಿಸಿದರು. ಶಿಕ್ಷಕ ಚಂದ್ರಶೇಖರ ಕೆ ಸಹಕರಿಸಿದರು.
