ಬಂಟ್ವಾಳ: ಲಯನ್ಸ್ ಮತ್ತು ಲಯನೆಸ್ ಕ್ಲಬ್ ಬಂಟ್ವಾಳ, ಜೆಸಿಐ ಬಂಟ್ವಾಳ, ಎಸ್ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯ ಉಜಿರೆ ಇವರ ಸಂಯುಕ್ತ ಆಶ್ರಯದಲ್ಲಿ ಯೋಗ ತರಬೇತಿ ಮತ್ತು ಯೋಗ ಚಿಕಿತ್ಸಾ ಶಿಬಿರ ಜೂ.1ರಿಂದ ಜೂ21ರವರೆಗೆ ಬೆಳಿಗ್ಗೆ 6ರಿಂದ 7ರವರೆಗೆ ಸಾರ್ವಜನಿಕರಿಗೆ ಹಾಗೂ ಸಂಜೆ 5.30ರಿಂದ 6.30ರವರೆಗೆ ಮಹಿಳೆಯರಿಗೆ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ. ರಕ್ತದೊತ್ತಡ, ಟೆನ್ಷನ್, ಮಧುಮೇಹ, ಅಲರ್ಜಿ, ಅಸ್ತಮ ನಿದ್ರಾಹೀನತೆ, ಗಂಟು ನೋವು ಮೊದಲಾದ ರೋಗಗಳಿಗೆ ಯೋಗ ಚಿಕಿತ್ಸೆ ಹಾಗೂ ಮಾಹಿತಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
