ಕೈಕಂಬ: ಗುರುಪುರ ಸಮೀಪದ ಅಡ್ಡೂರು ಅಳಕೆ ಎಂಬಲ್ಲಿ ಪಡಿಯವ್ವ ಹೆಬ್ಬಕ್ಕಿ ಎಂಬ ಆರು ವರ್ಷದ ಬಾಲಕಿ  ಪಡಿಯವ್ವ ಹೆಬ್ಬಕ್ಕಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ.
ಮೂಲತ: ಬಾಗಲಕೋಟೆಯ ಶೋಭವ್ವ ಹಾಗೂ ಕಲ್ಲಪ್ಪ ದಂಪತಿಗಳ ಪುತ್ರಿ. ಇವರು ಹಲವಾರು ವರ್ಷಗಳಿಂದ ಅಡ್ಡೂರು ಪರಿಸರದಲ್ಲಿಕೂಲಿ ಕಾರ್ಮಿಕರಾಗಿ ದುಡಿದು ಜೀವನ ಸಾಗಿಸುತ್ತಿದ್ದರು. ಎಂದಿನಂತೆ ಬಾಲಕಿಯ ತಂದೆ ತಾಯಿ ಕೆಲಸಕ್ಕೆ ಹೋದ ಸಂದರ್ಭ ಇವರ ಮೂವರು ಮಕ್ಕಳೊಂದಿಗೆ ಸ್ನಾನ ಮಾಡಲು ಹೋದ ಪಡಿಯವ್ವ ಹೆಬ್ಬಕ್ಕಿ  ನೀರಲ್ಲಿ ಮುಳುಗಿದ್ದಾಳೆ ಕೂಡಲೇ ಬಾಲಕಿಯ ಅಕ್ಕ ಬೊಬ್ಬೆಹಾಕಿದ್ದಾಳೆ.ಕೂಡಲೇ ಸ್ಥಳೀಯರು ಬಂದು ನದಿಯಲ್ಲಿ ಇಳಿದು ಹುಡುಕಾಡಿದಾಗ ಮಗುವನ್ನು ಮೇಲೆ ತೆಗೆದರು. ಮಗುವಿನ ಪ್ರಾಣಹಾರಿಹೋಗಿತ್ತು ಬಜಪೆ ಪೊಲೀಸರು ಬಂದು ತನಿಖೆ ನಡೆಸಿದ್ದಾರೆ.

 

By Suddi9

Leave a Reply

Your email address will not be published. Required fields are marked *