ಬಂಟ್ವಾಳ: ನಮಾಜ್ ಮುಗಿಸಿ ಮನೆಗೆ ತೆರಳುತ್ತಿದ್ದ ಯುವಕನೊಬ್ಬನಿಗೆ ಕಾರಿನಲ್ಲಿ ಬಂದ ತಂಡವೊಂಡು ಚೂರಿಯಿಂದ ಇರಿದು ಪರಾರಿಯಾದ ಘಟನೆ ಶುಕ್ರವಾರ  ಕಲ್ಲಡ್ಕದಲ್ಲಿ ನಡೆದಿದೆ. ಕಲ್ಲಡ್ಕ ನಿವಾಸಿ ಯೂಸೂಫ್ ಎಂಬವರ ಪುತ್ರ ಮಹಮ್ಮದ್ ಹಾಸಿರ್ ಚೂರಿ ಇರಿತಕ್ಕೊಳಾಗದ ಯುವಕನಾಗಿದ್ದಾನೆ.

011ಗಾಯಾಳುವನ್ನು ತುಂಬೆ ಆಸ್ಪತ್ರೆಗೆ ಸೇರಿಸಲಾಗಿದ್ದು ,ಪ್ರಾಣಾಪಾಯದಿಂ ದ ಪಾರಾಗಿದ್ದಾರೆಂದು ತಿಳಿದುಬಂದಿದೆ. ಕಲ್ಲಡ್ಕದ ಮಿಥುನ್ ಸಹಿತ ಮೂವರು ಈಕ್ರತ್ಯ ಎಸಗಿದ್ದಾರೆಂದು ತಿಳಿದುಬಂದಿದೆ. ಹಾಶಿರ್ ನಮಾಜ್ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಕಾರಿನಲ್ಲಿ ಬಂದ ಮಿಥುನ್ ಮತ್ತಾತನ ಸಹಚರರು ಚೂರಿಯಿಂದ ಇರಿದು ಆದೇ ಕಾರಿನಲ್ಲಿ ಪರಾರಿಯಾಗಿದ್ದಾರೆನ್ನಲಾಗಿದೆ.ಹಾಡುಹಗಲೇ ನಡೆದ ಈಕ್ರತ್ಯದಿಂದ  ಪರಿಸರದಲ್ಲಿ  ಕೆಲಕಾಲ ಉದ್ವಿಗ್ನ ಸ್ಥಿತಿ ಉಂಟಾಯಿತು.ತಕ್ಷಣ ಅಂಗಡಿ ಮುಂಗಟ್ಟುಗಳನ್ನು ಪೊಲೀಸರು ಮುಚ್ಚಿಸಿದರು.ಸ್ಥಳದಲ್ಲಿ ಜನ ಜಮಾಯಿಸುತ್ತಿದ್ದಂತೆ ದೌಡಾಯಿಸಿದ ಬಂಟ್ವಾಳ ನಗರ,ಗ್ರಾಮಾಂತರ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು.ಮುಂಜಾಗ್ರತಾಕ್ರಮವಾಗಿ ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.ಆರೋಪಿಗಳ ಪೈಕಿ ಮಿಥುನ್ ಇತ್ತೀಚೆಗಷ್ಟೆ ಪ್ರಕರಣವೊಂದರಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದನೆನ್ನಲಾಗಿದೆ.ಈಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.

By Suddi9

Leave a Reply

Your email address will not be published. Required fields are marked *