ಬಂಟ್ವಾಳ: ಪೆರಾಜೆ ಗ್ರಾಮ ಪಂಚಾಯತ್‍ನ 2017-18ನೇ ಸಾಲಿನ ಪ್ರಥಮ ಸುತ್ತಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋದನೆ ಗ್ರಾಮ ಸಬೆಯು ಮೇ. 24 ರಂದು ಬುಧವಾರ ಪೆರಾಜೆ ಗ್ರಾಮ ಪಂಚಾಯತ್‍ನ ಸಭಾಭವನದಲ್ಲಿ ನೋಡಲ್ ಅಧಿಕಾರಿಗಳಾದ ನೋಣಯ್ಯ ಸಹಾಯಕ ನಿರ್ದೇಶಕರು ಅಕ್ಷರದಾಸೋಹ ಬಂಟ್ವಾಳ ತಾಲೂಕು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.IMG20170524111908

ಪೆರಾಜೆ ಗ್ರಾಮ ಪಂಚಾಯತ್‍ನ ಅಧ್ಯಕ್ಷರಾದ ಪುಷ್ಪ, ಜಿಲ್ಲಾ ಸಂಯೋಜಕರಾದ ರಕ್ಷಿತ್ ಜೈನ್ ಹಾಗೂ ತಾಲೂಕು ಪಂಚಾಯತ್ ಸದಸ್ಯರಾದ ಮಂಜುಳ ಕುಶಾಲ ಎಂ. ಪೆರಾಜೆ ಹಾಗೂ ಪೆರಾಜೆ ಗ್ರಾಮ ಪಂಚಾಯತ್‍ನ ಉಪಾಧ್ಯಕ್ಷರಾದ ಗುಲಾಬಿ ತಾಲೂಕು ಸಹಾಯಕರಾದ ರೋಹಿತ್ , ಸಂಪನ್ಮೂಲ ವ್ಯಕ್ತಿಗಳಾದ ಜಯಲಕ್ಷ್ಮೀ ಕು. ಶುೃತಿ ಮತ್ತು ಕು. ಜಯಲಕ್ಷ್ಮೀ ಹಾಗೂ ಪೆರಾಜೆ ಗ್ರಾಮ ಪಂಚಾಯತ್‍ನ ಸದಸ್ಯರು ಊರಿನ ಪ್ರಮುಖರು ಹಾಗೂ ಉದ್ಯೋಗ ಚೀಟಿದಾರರು ಮತ್ತು ಪಂಚಾಯತ್ ಅಭಿವೃದ್ದಿ ಅಧಿಕಾರಿಯಾದ ನವೀನ್ ರಾಬರ್ಟ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು

By Suddi9

Leave a Reply

Your email address will not be published. Required fields are marked *