ಕೈಕಂಬ:  ಯೋಗವೇ ಜೀವನೆಂಬ ಪಥದಲ್ಲಿ ಪುಟಾಣಿ ಹೆಜ್ಜೆಗಳನ್ನಿರಿಸಿರುವ ನಿತ್ಯವೂ ಯೋಗಾಭ್ಯಾಸ ಮಾಡುತ್ತಾಕಲಿಯುವ ಹಾಗೂ ಕಲಿಸುವ ನಿಟ್ಟಿನಲ್ಲಿ ದೈಹಿಕವಾಗಿ,ಮಾನಸಿಕವಗಿ,ಬೌದ್ಧಿಕವಗಿ ಸ್ಥಿರತೆಯನ್ನು ಬೆಳೆಸಿಕೊಂಂಡು ಸೇವಾ ಮನೋಭಾವದಿಂದ ಆಧ್ಯಾತ್ಮಿಕ ಸಾಧಕರಾಗಿ, ಯೋಗದ ಪ್ರಚಾರವನ್ನು ಮಾಡುವ ಧ್ಯೇಯವನ್ನು ಬೆಳೆಸಿಕೊಳ್ಳುವ ಇಚ್ಚೆಯುಳ್ಳವರಿಗಾಗಿ ಯೋಗ ಶಿಕ್ಷಕರಾಗಲು “ಪ್ರಶಿಕ್ಷಣ ಶಿಬಿರಗಳನ್ನು ನಡೆಸುವ ಸಲುವಾಗಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ ನೇತ್ರಾವತಿ ವಲಯ ಮಂಗಳೂರು ಇದರ  ವತಿಯಿಂದ  ಮೇ. 24 ಬುಧವಾರದಿಂದ ಮೇ.28 ಭಾನುವಾರದವರೆಗೆ .”ಯೋಗ ಜೀವನ ದರ್ಶನ-2017″

37 ಜಿಲ್ಲಾ ಮಟ್ಟದ ಯೋಗ ಪಶಿಕ್ಷಣ ಶಿಬಿರಗಳು ಮಂಗಳೂರು ಸೇರಿದಂತೆ ಆರು ಸ್ಥಳಗಳಲ್ಲಿ ನಡೆಯಲಿದೆ. ಗ್ರಾಮಾಂತರ ವಲಯದಲ್ಲಿ   ಶ್ರೀ ರಾಮಕೃಷ್ಣ ತಪೋವನ ಪೊಳಲಿ ,ರಾಜರಾಜೇಶ್ವರಿ ಪ್ರೌಡಶಾಲೆ ಪೊಳಲಿ, ವಿದ್ಯಾವಿಲಾಸ ಹಿರಿಯ ಪ್ರಾಥಮಿಕ ಶಾಲೆ ಪೊಳಲಿಯಲ್ಲಿ   ಶಿಬಿರಗಳು ನಡೆಯಲಿದೆ.  ಮೇ. 24  ರಂದು ಗುರುವಾರ ಶ್ರೀ ರಾಮಕೃಷ್ಣ ತಪೋವನದಲ್ಲಿ  ವಿದೇಶಿಯರಿಗಾಗಿ ಅಂತಾರಾಷ್ಠ್ರೀಯ ಯೋಗ  ಪ್ರಶಿಕ್ಷಣ ಶಿಬಿರ ಉದ್ಘಾಟನೆ  ನಡೆಯಲಿದೆ.   ಉಳಿದ 36 ಯೋಗ ಪ್ರಶಿಕ್ಷಣ   ಶಿಬಿರಗಳು 25 ರಂದು ಉದ್ಘಾಟನೆಗೊಳ್ಳಲಿದೆ.   ಎಂದು ಪೊಳಲಿ ರಾಮಕೃಷ್ಣ ತಪೋವನದ ಶಾಖೆಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *