ಬಿ.ಸಿ.ರೋಡು : ಗುರುವಾರ ಮುಂಜಾನೆ ಗುಡುಗು ಮಿಂಚಿನಿಂದ ಕೂಡಿದ ಮಳೆಯಾಗಿದ್ದು, ಬಿ.ಸಿ.ರೋಡು – ಕಡೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂಟ್ವಾಳದ ಜಕ್ರಿಬೆಟ್ಟು ಸಮೀಪ ಕ್ಲಾರೀಸ್ ಅಟೋಮೊಬೈಲ್ ಸಂಸ್ಥೆಯ ಆವರಣ ಗೋಡೆಯು ಕುಸಿದಿದ್ದು ಸುಮಾರು 50 ಸಾವಿರ ರೂ.ಗಳಷ್ಟು ನಷ್ಟ ಅಂದಾಜಿಸಲಾಗಿದೆ. ಮಳೆಯ ನೀರು ಹಾದು ಹೋಗಲು ಇದ್ದ ಚರಂಡಿಯು ಕಸದಿಂದ ತುಂಬಿದ್ದು ನೀರು ರಸ್ತೆಯಿಂದ ನೇರ ಆವರಣ ಗೋಡೆಯ ಹತ್ತಿರ ಹಾದುಹೋಗಿದ್ದು, ಅಲ್ಲಿ ನೀರು ಶೇಖರಣೆಯಾಗಿ ಅವರಣ ಗೋಡೆ ಕುಸಿದಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.19YA kusita

By Suddi9

Leave a Reply

Your email address will not be published. Required fields are marked *