ಕೈಕಂಬ: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಡೂರು ಕಳಸಗುರಿ ಎಂಬಲ್ಲಿ ಬೈಕ್ ಮತ್ತು ಸರಕಾರಿ ಬಸ್ಸು ನಡುವೆ ಅಪಘಾತ ಸಂಭವಿಸಿದ್ದು ಬೈಕ್ ಸವಾರರ ಗಂಭೀರ ಗಾಯಗೊಂಡಿದ್ದು ಸ್ಥಳೀಯರ ಸಹಕಾರದಿಂದ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶುಕ್ರವಾರ ಸರಕಾರಿ ಬಸ್ಸು ಕೈಕಂಬ ಕಡೆಯಿಂದ ಪೊಳಲಿ ಕಡೆಗೆ ಬರುತ್ತಿದ್ದ ವೇಳೆ ಪುಂಚಮೆಯಿಂದ ಗಂಜಿಮಠ ಕೈಗಾರಿಕಾ ಕಂಪೆನಿಗೆ ಕೆಲಸಕ್ಕೆ ತೆರಲುತ್ತಿದ್ದ ಪುಂಚಮೆಯ ಸುನೀಲ್ ಫೆರ್ನಾಂಡೀಸ್ ಮತ್ತು ವಾಸು ಎನ್ನುವವರು ತನ್ನ ಡಿಸ್ಕವರಿ ಬೈಕ್ ನಲ್ಲಿ ತೆರಲುವ ವೇಳೆ ಈ ಅವಘಡ ಸಂಭವಿಸಿದೆ . ಗಾಯಾಳುಗಳನ್ನು ಅಡ್ಡೂರಿನ ಆಂಬ್ಯುಲೆನ್ಸ್ ವಾಹನದಲ್ಲಿ ನಗರದ ಆಸ್ಪತ್ರೆಗೆ ಸೇರಿಸಲಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಳಸಗುರಿ ಎಂಬಲ್ಲಿ ಹಲವಾರು ಅಪಘಾತಗಳು ಸಂಭವಿಸಿ ಪ್ರಾಣ ಕಳೆದುಕೊಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

