ವಿಟ್ಲ :ಶ್ರೀ ಕ್ಷೇತ್ರ ಧರ್ಮಸ್ಥಳ ಗಾಮ್ರಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ವಿಟ್ಲ ವಲಯ ಇದರ ಅಳಕೆಮಜಲು ಒಕ್ಕೂಟದ ಶ್ರೀರಕ್ಷಾ ತಂಡದ ರುಕ್ಯ ಇವರು ಮೃತರಾದ ಕಾರಣ ಅವರ ಪ್ರಗತಿನಿಧಿ ಸಾಲಕ್ಕೆ ಯೋಜನೆಯಿಂದ ಮಾಡಿದ ಪ್ರಗತಿನಿಧಿ ಜೀವ ಭದ್ರತಾ ವಿಮಾ ಯೋಜನೆಲ್ಲಿ ಮಂಜೂರಾದ ರೂ 43,545 ಹಾಗೂ ಉಕ್ಕುಡ ಒಕ್ಕೂಟದ ನಿಸರ್ಗ ತಂಡದ ಸದಸ್ಯೆ ಸೀತಾಲಕ್ಷ್ಮಿಯವರ ಪತಿ ಸುರೇಶ ಶೆಟ್ಟಿ ನಿಧನ ಹೊಂದಿದ ಕಾರಣ ಇವರ ಸಾಲಕ್ಕೆ ಮಾಡಿದ ಪ್ರಗತಿನಿಧಿ ಜೀವ ಭದ್ರತಾ ವಿಮಾ ಯೋಜನೆಯಿಂದ ರೂ 20000 ವನ್ನು ವಿಟ್ಲ ವಲಯ ಮೇಲ್ವಿಚಾರಕ ಜನಾರ್ಧನ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಯೋಜನೆಯ ಆಂತರಿಕ ಲೆಕ್ಕ ಪರಿಷೋದಕ ಪದ್ಮನಾಭ ಹಾಗೂ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.
