ಬಂಟ್ವಾಳ: ಕಲ್ಲಡ್ಕ ಸಮೀಪದ ಬಾಳ್ತಿಲ ಗ್ರಾಮದ ಕೊಡಂಗೆ ಕೋಡಿ ಎಂಬಲ್ಲಿ ಯುವಕನೊಬ್ಬನನ್ನು ದೊಡ್ಡಪ್ಪನ ಮಗನೇ ಕ್ಷುಲ್ಲುಕ ಕಾರಣಕ್ಕೆ ಕೋಳಿ ಬಾಳಿನಿಂದ ಇರಿದು ಹತ್ಯೆಗೈದ ಘಟನೆ ಸೋಮವಾರಮಧ್ಯ ರಾತ್ರಿ ನಡೆದಿದೆ . ಹತ್ಯೆಗೀಡಾದ ಯುವಕನನ್ನು ಇಲ್ಲಿನ ಗಣೇಶ್ ಎಂಬವರ ಪುತ್ರ ರಂಜಿತ್ (28)ಎಂದು ಗುರುತಿಸಲಾಗಿದೆ .ನೆರೆ ಮನೆಯಲ್ಲೆ ವಾಸವಿರುವ ಕೊಲೆಗೀಡಾದ ರಂಜಿತನ ದೊಡ್ಡಪ್ಪನ ಮಗ ನವೀನಯಾನೆ ರಾಜೇಶ್ ಈಕ್ರತ್ಯವೆಸಗಿದ್ದಾನೆ. ಸೋಮವಾರ ಸಂಜೆ ಬಾರೊಂದರಲ್ಲಿ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಮಾತಿನ ಚಕಮಕಿ ನಡೆದಿದ್ದು ,ಪರಸ್ಪರ ಹೊಡೆದಾಡಿಕೊಂಡಿದ್ದರು ಎನ್ನಲಾಗಿದೆ.ಸ್ಥಳೀಯರು ಇಬ್ಬರನ್ನು ಸಮಾಧಾನಪಡಿಸಿ ಮನೆಗೆ ಕಳುಹಿಸಿ ಕೊಟ್ಟಿದ್ದರು.
ಇದರ ಮುಂದುವರಿದ ಭಾಗವಾಗಿ ರಾತ್ರಿ ಸುಮಾರು ೧೧.೩೦ ರಹೊತ್ತಿಗೆ ವಿದ್ಯುತ್ ಕಡಿತಗೊಂಡಿತ್ತು.ಈಸಂದರ್ಭವನ್ನು ಬಳಸಿಕೊಂಡ ರಾಜೇಶ ನೆರೆಯಲ್ಲೆ ವಾಸವಾಗಿರುವ ರಂಜಿತ್ ಮನೆಗೆ ಏಕಾಏಕಿಯಾಗಿ ನುಗ್ಗಿ ಮಲಗಿದ್ದ ರಂಜಿತ್ಗೆ ಕೋಳೊ ಬಾಳಿನಿಂದ ಮಾರಣಾಂತಿಕವಾಗಿ ಇರಿದು ಪರಾರಿಯಾಗಿದ್ದಾನೆನ್ನಲಾಗಿದೆ.ಈ ವೇಳೆ ರಂಜಿತನ ತಂದೆ,ತಾಯಿ ತಡೆದರಾದರೂ ಅವರಿಗೂ ಹಲ್ಲೆ ನಡೆಸಿದ್ದಾನೆನ್ನಲಾಗಿದೆ.ಸ್ಥಳಿಯರು ತಕ್ಷಣ ಗಾಯಾಳು ರಂಜಿತನನ್ನು ಆಸ್ಪತ್ರೆಗೆ ಸಾಗಿಸಿದರಾದರೂ ತೀವ್ರ ರಕ್ತಸ್ರಾವದಿಂದ ಅದಾಗಲೇ ಮ್ರತಪಟ್ಟಿದ್ದ ನೆನ್ನಲಾಗಿದೆ.ಮ್ರತನ ತಂದೆ,ತಾಯಿ ಅಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದು ಬಂದಿದೆ. ಮೃತರಿಗೆ ಪತ್ನಿ ಮತ್ತು ಮೂರು ತಿಂಗಳ ಹೆಣ್ಣು ಮಗು ಇದೆ.ಇವರಿಗೆ ಕಳೆದ ವರ್ಷವಷ್ಟೆ ವಿವಾಹವಾಗಿತ್ತು. ಸ್ಥಳಕ್ಕೆ ಹೆಚ್ನಚುವರಿ ಪೊಲೀಸ್ ವರಿಷ್ಟಾಧಿಕಾರಿ ವೇದಮೂರ್ತಿ,ಡಿವೈಎಸ್ಪಿ ರವೀಶ್ ಸಿಆರ. ಸಿಐ ಬಿ.ಕೆ.ಮಂಜಯ್ಯ,ಎಸ್ ಐ ರಕ್ಷಿತ್ ಭೇಟಿ ನೀಡಿ ಪರಿಶೀಲನೆನಡೆಸಿದ್ದಾರೆ.ಈ ಬಗ್ಗೆ ನಗರ ಠಾಣಾ ಪೊಲೀಸರು ಕೇಸು ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ .ಆರೋಪಿಗಾಗಿ ಶೋಧ ಕಾರ್ಯನಡೆಯುತ್ತಿದೆ.
ಆರೋಪಿ ನವೀನ್ ಎಂಬತನನ್ನು ಪೊಲೀಸರು ಬಂಧಿಸಿದ್ದಾರೆ


