pejavara shree

ಹೊಸದಿಲ್ಲಿ: ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಗಳವಾರ ಭೇಟಿ ಮಾಡಿ ಆಶೀರ್ಮಾದ ನೀಡಿ ಮಾತುಕತೆ ನಡೆಸಿದರು. ಬಳಿಕ ಮೋದಿಯವರಿಗೆ ಹಿತವಚನ ನೀಡಿದ ಪೇಜಾವರ ಶ್ರೀಗಳು ತಾವು ತಮ್ಮ ಅವಧಿಯಲ್ಲಿ ಉತ್ತಮ ಕೆಲಸ ಮಾಡಬೇಕು, ಗಂಗಾ ಶುದ್ದೀಕರಣ ಸೇರಿದಂತೆ ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಹೇಳಿದ್ದಾರೆ.  ಮಂಗಳೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಪೆಟ್ರೋಲಿಯಂ, ಕೆಮಿಕಲ್ ಮತ್ತು ಪೆಟ್ರೋಕೆಮಿಕಲ್ ಇನ್ವೆಸ್ಟ್ ಮೆಂಟ್ ರೀಜನ್ ಗೆ ಸುಮಾರು 70,000 ಎಕರೆಫಲವತ್ತಾದ ¸ಭೂಮಿ ಬಳಕೆ ಆಗುವುದರ ಬಗ್ಗೆ ಮೋದಿ ಅವರ ಗಮನಕ್ಕೆ ತಂದಿರುವುದಾಗಿಯೋ ಅವರು ತಿಳಿಸಿದ್ದಾರೆ. ಗಂಗಾಶುದ್ಧೀಕರಣ ಯೋಜನೆಗೆ ಸಂಪೂರ್ಣ ಸಹಕಾರ, ಸಲಹೆ ನೀಡುವುದಾಗಿಯೂ ಪೇಜಾವ್ರ ಶ್ರೀಗಳು ಮೋದಿ ಅವರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

By suddi9

Leave a Reply

Your email address will not be published. Required fields are marked *