ಪಾಟ್ನಾ: ಬಿಹಾರದಲ್ಲಿ ಮಾವೋವಾದಿಗಳ ಅಟ್ಟಹಾಸ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇಂದು ಬೆಳ್ಳಂಬೆಳಗ್ಗೆ ಮಾವೋವಾದಿ ಕೆಂಪು ಉಗ್ರರು ಗಯಾ-ಮುಗಲ್ ಸರಾಯ್ ಮಾರ್ಗ ಮಧ್ಯೆ ರೈಲು ಹಳಿಯನ್ನು ಸ್ಫೋಟಿಸಿದ್ದು, ರೈಲು ಸಂಚಾರ ಸ್ಥಗಿತ ಗೊಂಡಿದೆ. ಒಂದು ವೇಳೆ ಇದೇ ಮಾರ್ಗದಲ್ಲಿ ರೈಲು ಆಗಮಿಸಿದ್ದರೆ ಭಾರೀ ಅಪಘಾತ ಸಂಭವಿಸುವ ಸಾಧ್ಯತೆ ಇದ್ದು ಅದೃಷ್ಟವಶಾತ್ ಸಂಭಾವ್ಯ ದುರಂತ ತಪ್ಪಿದಂತಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ 10ಕ್ಕೂ ರೈಲುಗಳ ಸಂಚಾರ ಸ್ಥಗಿತಗೊಂಡಿದ್ದು ಮೂರು ಎಕ್ಸ್ಪ್ರೆಸ್ ರೈಲುಗಳು ಹಳಿಯಲ್ಲೇ ಬಾಕಿಯಾಗಿವೆ. ಪ್ರಯಾಣಿಕರು ಪರದಡುತ್ತಿದ್ದಾರೆ.
ಗುಪ್ತಚರ ಇಲಾಖೆ ಈ ಮೊದಲೇ ರೈಲ್ವೆ ಇಲಖೆಗೆ ಎಚ್ಚರಿಕೆ ಸೂಚಿಸಿತ್ತು, ಆದರೆ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಇಷ್ಟೆಲ್ಲಾ ಅನಾಹುತ ಸಂಭವಿಸಲು ಕಾರಣವಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ
