ಬಂಟ್ವಾಳ: ಗ್ರಾನೈಡ್ ಸಾಗಿಸುತ್ತಿದ್ದ ಲಾರಿಯೊಂದು ಚಾಲಕ ನಿಯಂತ್ರಣ ಕಳೆದು ರಸ್ತೆಯಲ್ಲೇ ಪಲ್ಟಿಯಾದ ಪರಿಣಾಮ ಒಬ್ಬ ಮೃತಪಟ್ಟು ನಾಲ್ವರು ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಬೆಂಜನಪದವು ಸಮೀಪದ ಕೆಂಪು ಗುಡ್ಡೆ ಸೋಮವಾರ ಸಂಜೆ ಸಂಭವಿಸಿದೆ.ಮಹೇಶ್ ಮೃತಪಟ್ಟವರು. ಇವರ ವಿಳಾಸ ತಿಳಿದು ಬಂದಿಲ್ಲ. ಲಾರಿ ಚಾಲಕ ರಿಯಾಝ್ ಸಹಿತ ದಿನೇಶ್, ಬಾಬು, ಮುಖೇಶ್ ಎಂಬವರು ಗಂಭೀರ ಗಾಯಗೊಂಡಿದ್ದಾರೆ. 
ಬೆಂಜನಪದವಿನ ಕುರಿಯಾಲದ ಸುನಿಲ್ ಲೋಬೊ ಎಂಬವರ ಮನೆಗೆ ಸುರತ್ಕಲ್ನಿಂದ ಗ್ರಾನೈಡ್ ಸಾಗಿಸುತ್ತಿದ್ದ ಲಾರಿ ಕೆಂಪುಗುಡ್ಡೆಯ ಅಪಾಯಕಾರಿ ತಿರುವಿನಲ್ಲಿ ಸಂಚಾರಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದರಿಂದ ಈ ಘಟನೆ ನಡೆದಿದೆ. ಮೃತಪಟ್ಟ ಮಹೇಶ್ ಲಾರಿಯ ಹಿಂಬದಿಯಲ್ಲಿ ಗ್ರಾನೈಡ್ಗಳ ಮೇಲೆ ಕುಳಿತಿದ್ದ. ಪಲ್ಟಿಯಾಗುವ ರಭಸಕ್ಕೆ ಗ್ರಾನೈಡ್ಗಳು ಅವರ ಮೈಮೇಲೆ ಬಿದ್ದಿದೆ ಎನ್ನಲಾಗಿದೆ. ಗ್ರಾನೈಡ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹೇಶ್ ಅನ್ಲೋಡ್ ಮಾಡಲೆಂದು ಲಾರಿಯಲ್ಲಿ ಬೆಂಜನಪದವಿಗೆ ಬಂದಿದ್ದರು.
ಘಟನೆಯ ಬಗ್ಗೆ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
