ಬಂಟ್ವಾಳ: ಇಲ್ಲಿನ ಕೈಕುಂಜೆ ಪಶ್ಚಿಮ ಬಡಾವಣೆಯಲ್ಲಿರುವ ಆರಾಧ್ಯ ಲೇ ಔಟ್ನಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿರಿಸಲಾಗಿರುವ 41 ಸೆಂಟ್ಸ್ ಜಮೀನನ್ನು ಬುಧವಾರ ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ, ಮುಖ್ಯಾಧಿಕಾರಿ ಸುಧಾಕರ ವೀಕ್ಷಿಸಿದರು. ಟ್ರಾಫಿಕ್ ಪೊಲೀಸ್ ಠಾಣೆ ಹಾಗೂ ಎಆರ್ಟಿಓ ಕಚೇರಿ ನಿರ್ಮಿಸಲು ಸರಕಾರದಿಂದ ಜಮೀನಿನ ಬೇಡಿಕೆ ಬಂದಿದ್ದು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧರಿಸಲಾಗಿದೆ.

