ಬಂಟ್ವಾಳ: ತಾಲೂಕಿನ ಮಾಣಿ ಸಮೀಪದ ಅನಂತಾಡಿ ಮತ್ತು ನೆಟ್ಲಮುಡ್ನೂರು ಗ್ರಾಮಗಳಿಗೆ ಸಂಬಂ„ಸಿದ ಕರಿಂಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪುನರ್‍ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಮೇ 7ರಿಂದ ಮೇ 15ರವರೆಗೆ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ದೇವಸ್ಥಾನದ ಶ್ರೀ ದೇವಿ ಕಲ್ಯಾಣ ಮಂಟಪದಲ್ಲಿ ಜರಗಿತು.
ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿ ಮಾತನಾಡಿ ಗ್ರಾಮಸ್ಥರೆಲ್ಲರೂ ನಮ್ಮ ದೇವಸ್ಥಾನವೆಂಬ ಭಾವನೆಯಿಂದ ಒಗ್ಗೂಡಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಯಶಸ್ವಿಗೊಳಿಸಬೇಕು ಎಂದು ನುಡಿದರು.

karinka
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ಎಸ್. ಸಂಕಪ್ಪ ರೈ, ಕಾರ್ಯದರ್ಶಿ ಡಾ. ಮನೋಹರ ರೈ, ಪ್ರ. ಅರ್ಚಕ ರಾಮ ಸಗ್ರಿತ್ತಾಯ, ವ್ಯವಸ್ಥಾಪನಾ ಸಮಿತಿ ಸದಸ್ಯೆ ಲಕ್ಷ್ಮಿ ಕೃಷ್ಣದಾಸ ಹೆಗ್ಡೆ ಉರ್ದಿಲಗುತ್ತು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರ್ಷೇಂದ್ರ ಶೆಟ್ಟಿ ಬಾಳಿಕೆ,ಉಪಾಧ್ಯಕ್ಷ ಹರೀಶ್ ಪೂಜಾರಿ ಬಾಕಿಲ, ಕಾರ್ಯದರ್ಶಿ ತನಿಯಪ್ಪ ಗೌಡ ದಾಸಕೋಡಿ,ಕೋಶಾಧಿಕಾರಿ ಲಿಂಗಪ್ಪ ಶೆಟ್ಟಿ,ಪ್ರಮುಖರಾದ ರಾಮ ಕಿಶನ್ ರೈ ನೇಲ್ತೊಟ್ಟು,ಅನಸೂಯ ಶೆಟ್ಟಿ ಉರ್ದಿಲಗುತ್ತು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಗೋಪಾಲಕೃಷ್ಣ ನೇರಳಕಟ್ಟೆ ಅವರು ಸ್ವಾಗತಿಸಿದರು. ವೆಂಕಟೇಶ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *