ಬಂಟ್ವಾಳ: ಸಂಗೀತದಿಂದ ಮನಸ್ಸಿಗೆ ನೆಮ್ಮದಿ ಮತ್ತು ಸಂತೋಷ ಹಾಗೂ ಯುವಜನರಲ್ಲಿ ಸಂಗೀತದ ಆಸಕ್ತಿಯಿಂದ ಸಾಮಾಜಿಕ ಜೀವನದಲ್ಲಿ ಧನಾತ್ಮಕ ಪರಿವರ್ತನೆ ಸಾಧ್ಯ ಎಂದು ಬಂಟ್ವಾಳ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಗಿರೀಶ್ ಭಟ್ ಅಜೆಕಳ ಹೇಳಿದರು.

ಅವರು ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಫರಂಗಿಪೇಟೆ ಇದರ ಸಂಗೀತ ಕಲಾ ಕೇಂದ್ರದ ಸಂಗೀತ ತರಗತಿಯ ವಾರ್ಷಿಕ ಸಂಗೀತೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ವೇದಿಕೆಯಲ್ಲಿ ಸೇವಾಂಜಲಿಯ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ, ಸೇವಾಂಜಲಿ ಸಂಗೀತ ಗುರು ವಿದ್ವಾನ್ ಕೃಷ್ಣ ಆಚಾರ್ ದಂಪತಿ, ಟ್ರಸ್ಟಿಗಳಾದ ದೇವಾದಾಸ ಶೆಟ್ಟಿ ಕೊಡ್ಮಾನ್, ಪುಂಚಮೆ ಪದ್ಮನಾಭ ಶೆಟ್ಟಿ, ಪ್ರಕಾಶ್ ಕಿದೆಬೆಟ್ಟು, ರಾಮಕೃಷ್ಣ ಗಾಂಭೀರ, ದೇವದಾಸ ಮಾಸ್ತರ್ ತುಪ್ಪೆಕಲ್ಲು ಹಾಜರಿದ್ದರು. ಈ ಸಂದರ್ಭ ಸೇವಾಂಜಲಿಯ ಸಂಗೀತ ವಿದ್ಯಾರ್ಥಿಗಳಿಂದ ಗುರು ವಂದನೆ, ಶಾಸ್ತ್ರಿಯ ಸಂಗೀತ ಗಾಯನಕಾರ್ಯಕ್ರಮ, ಸಂಗೀತ ವಿದ್ವಾನ್ ಟಿ.ಪಿ. ಶ್ರೀನಿವಾಸ ಕೇರಳ ಅವರಿಂದ ಮರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಜರುಗಿತು.
