ಬಂಟ್ವಾಳ: ಪ್ರತಿಯೋರ್ವರು ತಮ್ಮ ಆರೋಗ್ಯದ ಕಡೆಗೆ ನೈಜಕಾಳಜಿಯನ್ನು ಬೆಳೆಸಿಕೊಳ್ಳಬೇಕು, ಉತ್ತಮ ಆರೋಗ್ಯವೇ ನಿಜವಾದ ಭಾಗ್ಯ ಎಂದು ಬಂಟ್ವಾಳ ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ ಹೇಳಿದರು. ಶೇಡಿಗುರಿ ಯುವಸಂಗಮ ಸೇವಾ ಟ್ರಸ್ಟ್ ಆಶ್ರಯದಲ್ಲಿ ದಿ.ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮರಣಾರ್ಥ ಶಂಭೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಭಾನುವಾರ ಜರಗಿದ ಉಚಿತ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಕೆಸಲದ ಒತ್ತಡಗಳ ನಡುವೆ ನಮ್ಮ ಆರೋಗ್ಯದ ಬಗ್ಗೆ ನಾವು ತಾತ್ಸಾರ ಮನೋಭಾವ ತಾಳುತ್ತೇವೆ, ಇಂತಹಾ ಶಿಬಿರಗಳ ಮೂಲಕ ಆರೋಗ್ಯವನ್ನು ಸುಸ್ಥಿರ ಸ್ಥಿತಿಯಲ್ಲಿ ಇಟ್ಟುಕೊಳ್ಳುವ ನಿಟ್ಟಿನಲ್ಲಿ ಕಾಳಜಿವಹಿಸಬೇಕೆಂದರು.

DSC_7162

DSC_7154

ಯುವಸಂಗಮ ಸೇವಾಟ್ರಸ್ಟ್‍ನ ಅಧ್ಯಕ್ಷ ಬೊಂಡಾಲ ಜಗನ್ನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ತುಂಬೆ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಸಹಕಾರದೊಂದಿಗೆ ವೈದ್ಯಕೀಯ ಶಿಬಿರ ಆಯೋಜಿಸಿರುವುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ನರಿಕೊಂಬು ಗ್ರಾಮ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು. ನರಿಕೊಂಬು ಗ್ರಾ.ಪಂ.ಅಧ್ಯಕ್ಷ ಯಶೋಧರ ಕರ್ಬೆಟ್ಟು,ತಾ.ಪಂ.ಸದಸ್ಯೆ ಗಾಯತ್ರಿ ರವೀಂದ್ರ ಸಫಲ್ಯ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಪದ್ಮನಾಭ ಮಯ್ಯ ಶುಭಹಾರೈಸಿದರು. ತುಂಬೆ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಎಂ.ಡಿ. ಡಾ.ಎ.ಕಿರಣ್ ಶೆಟ್ಟಿ, ಉದ್ಯಮಿ ಪಿ.ಎಸ್.ಅಬ್ದುಲ್ ಹಮೀದ್, ಗೋವಿಂದ ಪೂಜಾರಿ ಏಲಬೆ, ಸುನೀತಾ ಪದ್ಮನಾಭ, ಆಲ್ಭರ್ಟ್ ಮಿನೇಜಸ್, ಶಾಲಾ ಮುಖ್ಯಗುರು ಕಮಲಾಕ್ಷ ಕಲ್ಲಡ್ಕ, ಗ್ರಾ.ಪಂ.ಮಾಜಿ ಅಧ್ಯಕ್ಷ ಆನಂದ ಸಾಲ್ಯಾನ್, ಚಿತ್ತರಂಜನ್ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿದ್ದರು.
ಯಶೋಧರ ಸ್ವಾಗತಿಸಿದರು, ಕೇಶವ ನಾಯ್ಕ್ ವಂದಿಸಿದರು.
ಶಿಕ್ಷಕ ಸದಾಶಿವ ನಾಯ್ಕ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ನಡೆದ ವೈದ್ಯಕೀಯ ಶಿಬಿರದಲ್ಲಿ ಗ್ರಾಮದ ನೂರಾರುಮಂದಿ ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದುಕೊಂಡರು.

By Suddi9

Leave a Reply

Your email address will not be published. Required fields are marked *