ಬಂಟ್ವಾಳ: 12ನೇ ಶತಮಾನದಲ್ಲಿ ಆರಂಭಗೊಂಡ ಬಸವಣ್ಣ ಚಿಂತನೆ ತತ್ವಾದರ್ಶ ಇಂದಿಗೂ ಸರ್ವಕಾಲಿಕ ಎಂದು ತಹಶೀಲ್ದಾರ್ ಪುರಂಧರ ಹೆಗಡೆ ನುಡಿದರು.
ಅವರು ರಾ ಷ್ಟ್ರೀಯ ಹಬ್ಬ ಗಳ ಸಮಿತಿ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಕಚೇರಿಯಲ್ಲಿ ಶನಿವಾರ ನಡೆದ ಬಸವಣ್ಣ ಜಯಂತಿ ಆಚರಣೆಯ ಅಧ್ಯಕ್ಷತೆ ವಹಿಸಿ , ಉದ್ಘಾಟಿಸಿ ಮಾತನಾಡಿದ ಅವರು ಸಮಾಜದ ಜಾತಿ ವ್ಯವಸ್ಥೆ ಪದ್ಧತಿಯ ವಿರುದ್ಧ ಕ್ರಾಂತಿಕಾರಿ ಹೋರಾಟ ನಡೆಸಿದವರಲ್ಲಿ ಬಸವಣ್ಣ ಶ್ರೇಷ್ಠ ದಾ ರ್ಶನಿಕರಾಗಿದ್ದಾರೆ.

KAR_2790
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಿಪ್ರಿಯನ್ ಮಿರಾಂದ ಮಾತನಾಡಿ ಬಸವಣ್ಣ ಚಿಂತನೆಯನ್ನು ಮೈಗೂಡಿಸಲು ವಿದ್ಯಾರ್ಥಿಗಳು ಪ್ರಯತ್ನಿಸಬೇಕೆಂದರು.
ಉಪತಹಶೀಲ್ದಾರ್ ಭಾಸ್ಕರ್ ರಾವ್, ಅಪರಾಧ ವಿಭಾಗದ ಪಿಎಸ್‍ಐ ಗಂಗಾಧರಪ್ಪ , ಪತ್ರಕರ್ತ ಫಾರೂಕ್ ಗೂಡಿನಬಳಿ, ಕಂದಾಯ ನಿರೀಕ್ಷಕರಾದ ರಾಮ.ಕೆ., ದಿವಾಕರ್, ತಾಲೂಕು ಆಡಳಿತ ಶಾಖೆಯ ಸೀತಾರಾಮ ಕಮ್ಮಾಜೆ , ರಾ ಷ್ಟ್ರೀಯ ಹಬ್ಬ ಗಳ ಸಮಿತಿಯ ವಿಷಯ ನಿರ್ವಾಹಕ ವಿಷು ಕುಮಾರ್ ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ನವೀನ್ ಸ್ವಾಗತಿಸಿದರು. ಗ್ರಾಮ ಕರಣಿಕರ ಸಂಘದ ಜಿಲ್ಲಾಧ್ಯಕ್ಷ ಜನಾರ್ಧನ್ ವಂದಿಸಿದರು. ಈ ಸಂದರ್ಭದಲ್ಲಿ ತಾಲೂಕು ಕಚೇರಿ ಸಿಬ್ಬಂದಿಗಳು, ಗ್ರಾಮ ಕರಣಿಕರು, ಗ್ರಾಮ ಸಹಾಯಕರು ಹಾಜರಿದ್ದರು.

By suddi9

Leave a Reply

Your email address will not be published. Required fields are marked *