ಕಲ್ಲಡ್ಕ,ಜು.22: ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ಘಟಕದ ವತಿಯಿಂದ ಕಲ್ಲಡ್ಕ ಪೇಟೆಯಲ್ಲಿ ಶ್ರೀ ರಾಮ ಪದವಿ ಹಾಗೂ ಪದವಿಪೂರ್ವ ವಿದ್ಯಾಥರ್ಿಗಳಿಂದ ಸುಮಾರು 20 ನಿಮಿಷಗಳ ಕಾಲ ರಸ್ತೆ ತಡೆಯುವುದರ ಮೂಲಕ ರಾಜ್ಯಾದ್ಯಂತ ನಡೆಯುತ್ತಿರುವ ಆತ್ಯಾಚಾದರ ವಿರುದ್ಧವಾಗಿ ಪ್ರತಿಭಟನೆಯನ್ನು ನಡೆಸಲಾಯಿತು. ಸುಮಾರು 900 ವಿದ್ಯಾಥರ್ಿಗಳು ಸ್ವ ಇಚ್ಚೆಯಿಂದ ತರಗತಿಯನ್ನು ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ನಂತರ ತಾಲೂಕು ತಹಶೀಲ್ದಾರರಿಗೆ ವಿದ್ಯಾಥರ್ಿಗಳು ಮನವಿಯನ್ನು ಸಲ್ಲಿಸಿದರು.

22-3

22-1

22-2
ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ನ ರಾಜ್ಯ ಕಾರ್ಯಕಾರಿಣಿ ಕು.ಅಕ್ಷತಾ ಮಾತನಾಡಿ ರಾಜ್ಯದಲ್ಲಿ ನಡೆಯುತ್ತಿರುವ ಆತ್ಯಾಚಾರದ ಬಗ್ಗೆ ಜಾಗೃತರಾಗಿರಬೇಕು. ಇದಕ್ಕೆಲ್ಲ ರಾಜಕೀಯದವರ ಕೈವಾಡವಿದ್ದು ರಾಜಕೀಯ ನಾಯಕರು ವಿಧಾನಸೌದದಲ್ಲಿ ಗೊರಕೆ ಹೊಡೆಯುತ್ತಿದ್ದಾರೆಯೇ ವಿನಃ ಕಾನೂನಾತ್ಮಕವಾಗಿ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಹೀಗೆಯೇ ಮುಂದುವರಿದರೆ ವಿದ್ಯಾಥರ್ಿ ಪರಿಷತ್ ಕಾನೂನನ್ನು ಮುಂದಿನ ದಿನಗಳಲ್ಲಿ ಕೈಗೆತ್ತಿಕೊಂಡು ಹೋರಾಟ ನಡೆಸುತ್ತದೆ ಎಂದು ಸರಕಾರಕ್ಕೆ ಎಚ್ಚರಿಸಿದರು.
ಆತ್ಯಾಚಾರಕ್ಕೆ ಒಳಪಟ್ಟ ಉಜಿರೆಯ ಸೌಜನ್ಯ, ಮಂಗಳೂರಿನ ಅಕ್ಷತಾ, ರತ್ನಾ ಕೊಠಾರಿ ಇವರ ಸಾವಿಗೆ ನ್ಯಾಯ ಒದಗಿಸುವವರು ಯಾರು ಎಂದು ಪ್ರಶ್ನಿಸಿದರು.
ವಿದ್ಯಾಥರ್ಿ ಪ್ರತಿನಿಧಿಯಾಗಿ ಮಾತನಾಡಿದ ಮಾನಸ ಗುಪ್ತಾ, ನಮ್ಮ ಸಮಾಜದಲ್ಲಿ ಮಹಿಳೆಯರ ಮೇಲೆ ಆತ್ಯಾಚಾರ ಹೆಚ್ಚಾಗುತ್ತಿದ್ದರೂ ನಾವು ಯಾವುದಕ್ಕೂ ಅಂಜದೆ ತೊಟ್ಟಿಲನ್ನು ತೂಗಿದಂತಹ ಕೈಗಳು ದೇಶವನ್ನು ಆಳಬಹುದು ಎಂದು ಎಚ್ಚರಿಸುತ್ತಿದ್ದೇವೆ. ವಿದ್ಯಾಥರ್ಿನಿಯರ ಜೀವನವು ಕೆಟ್ಟ ವಿಚಾರಗಳಿಗೆ ಬಲಿಯಾಗದೇ ಅವರು ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ವಿನಂತಿಸಿಕೊಂಡರು. ಇಂದಿನ ಪರಿಸ್ಥಿತಿಯಲ್ಲಿ ಹೆಣ್ಣುಮಗಳೊಬ್ಬಳೇ ಮನೆಯಲ್ಲಿ ಇರುವೂದಕ್ಕೂ ಸಾಧ್ಯವಾಗದ ವಾತಾವರಣ ನಿಮರ್ಾಣವಾಗಿದೆ ಎಂದು ಹೇಳಿದರು.
ಮಾಧ್ಯಮಗಳು ತಮ್ಮ ಟಿಆರ್ಪಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಶ್ಲೀಲ ಚಿತ್ರಗಳನ್ನು ಪ್ರದಶರ್ಿಸಿ ಆತ್ಯಾಚಾರಕ್ಕೆ ಪ್ರೇರೆಪಿಸುವಲ್ಲಿ ಅವಕಾಶ ಮಾಡಿಕೊಡುತ್ತಿದೆ ಎಂದೂ ಇದನ್ನೆಲ್ಲ ಕೇಳಲು ಮಾಧ್ಯಮಗಳಿಗೆ ಸೆನ್ಸಾರ್ ಬೋಡರ್್ ಇಲ್ಲವೇ ಎಂದು ಪ್ರಶ್ನಿಸಿದರು.
ನಮ್ಮ ರಾಜಕಾರಣಿಗಳು ಕೇವಲ ವೇದಿಕೆಯ ಮೇಲೆ ಎದೆ ಹೊಡೆದುಕೊಂಡು, ಗಂಟಲು ಕೆರೆದುಕೊಂಡು, ಮೇಜು ಗುದ್ದುಕೊಂಡು ಮಹಿಳೆಯರಿಗೆ ಸಮಾನತೆ, ಮಹಿಳಾ ಮೀಸಲಾತಿ ಅಂತ ಭಾಷಣ ಮಾಡುತ್ತಿದ್ದರೆ ವಿನಃ, ನಿಜವಾಗಲೂ ಮಹಿಳೆಯರ ಒಳಿತು, ಕೆಡುಕುಗಳ ಬಗ್ಗೆ ಯೋಚನೆ ಮಾಡುವವರು ಬಹಳಷ್ಟು ಕಡಿಮೆ, ನಿಮ್ಮ ಮಿಸಲಾತಿಯ ಅವಶ್ಯಕತೆ ನಮ್ಮಗಿಲ್ಲ ಸಾಧ್ಯವಾದರೆ ಸಮಾನತೆ ಒದಗಿಸಿ ಎಂದು ಸಕರ್ಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪದವಿ ಹಾಗೂ ಪದವಿಪೂರ್ವ ವಿಭಾಗದ ವಿದ್ಯಾಥರ್ಿ ನಾಯಕರಾದ ಉದಯ ಸಾಲಿಯಾನ್, ಶಿವಪ್ರಸಾದ್,ಅ.ಭಾ.ವಿ.ಪ ಅಧ್ಯಕ್ಷರಾದ ಪವನ್, ಕಾರ್ಯದಶರ್ಿ ಪುನೀತ್, ವಿನಾಯಕ, ಸ್ವರ್ಣಕೀತರ್ಿ, ರಕ್ಷಿತ್ ಸದಸ್ಯರುಗಳಾದ ನವೀನ್ ಕುಮಾರ್, ಧನುಷ್ ಪಕ್ಕಳ, ರಾಕೇಶ್,ಮೋಹನ್, ಪ್ರಣಮ್, ,ಸಹಕರಿಸಿದರು.

By Suddi9

Leave a Reply

Your email address will not be published. Required fields are marked *