ಬಂಟ್ವಾಳ:ತಾಲ್ಲೂಕಿನ ಕುಲಾಲ ಸುಧಾರಕ ಸಂಘದ ಅಧ್ಯಕ್ಷರಾಗಿ ಬಿ. ಸತೀಶ್ ಕುಲಾಲ್ ಪುನರಾಯ್ಕೆಯಾಗಿದ್ದಾರೆ. ಬಿ.ಸಿ.ರೋಡು ಸಂಘದ ಸಭಾಂಗಣದಲ್ಲಿ ಈಚೆಗೆ ನಡೆದ 37ನೇ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ.

ಉಪಾಧ್ಯಕ್ಷರಾಗಿ ಡಿ.ಎಂ.ಕುಲಾಲ್, ಪ್ರಧಾನ ಕಾರ್ಯದರ್ಶಿಯಾಗಿ ಹರಿಪ್ರಸಾದ್, ಕೋಶಾಧಿಕಾರಿಯಾಗಿ ಜಲಜಾಕ್ಷಿ, ಚೆನ್ನಪ್ಪ ಬಂಗೇರ, ಜತೆ ಕಾರ್ಯದರ್ಶಿಯಾಗಿ ಯೋಗೀಶ್ ಬಂಗೇರ ಮತ್ತು ಯಾದವ ಅಗ್ರಬೈಲು, ಸಂಘಟನಾ ಕಾರ್ಯದರ್ಶಿಯಾಗಿ ಮಾಧವ ಕುಲಾಲ್, ಕ್ರೀಡಾ ಕಾರ್ಯದರ್ಶಿಯಾಗಿ ಸುಕುಮಾರ ಬಂಟ್ವಾಳ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ದಾಮೋದರ ಮಾಸ್ತರ್ ಏರ್ಯ ಮತ್ತು ಬಿ.ಲಿಂಗಪ್ಪ ಮಾಸ್ತರ್ ಪೊಸಳ್ಳಿ, ಮಹಿಳಾ ಘಟಕ ಅಧ್ಯಕ್ಷೆಯಾಗಿ ಜಯಂತಿ ಟೀಚರ್, ಸೇವಾದಳ ದಳಪತಿಯಾಗಿ ಸದಾನಂದ ಬಂಗೇರ ಆಯ್ಕೆಯಾಗಿದ್ದಾರೆ. ಇದೇ ವೇಳೆ ಕಾರ್ಯಕಾರಿ ಸಮಿತಿಗೆ ಮನೋಹರ ನೇರಂಬೋಳು, ಗಣೇಶ್ ಮರ್ದೋಳಿ, ಪ್ರೇಮ ಪೊಸಳ್ಳಿ, ರಮೇಶ್ ಸಾಲ್ಯಾನ್, ಮಚ್ಚೇಂದ್ರ ಸಾಲ್ಯಾನ್, ಯಶೋಧ ಕೃಷ್ಣಪ್ಪ, ಎ.ಲಿಂಗಪ್ಪ ಕೈಕುಂಜೆ, ಸುಂದರ್ ಬಿ., ಎ. ಪದ್ಮನಾಭ, ರಾಧಾಕೃಷ್ಣ, ಕೇಶವ ಬಂಗೇರ, ಸತೀಶ್ ಸಂಪಾಜೆ, ನಾರಾಯಣ ಸಿ. ಪೆರ್ನೆ ಇವರನ್ನು ಸೇರ್ಪಡೆಗೊಳಿಸಲಾಯಿತು.
