ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿ ಸನ್ನಿಧಿಯಲ್ಲಿ 28 ನೇ ದಿನದ ಜಾತ್ರಾ ಮಹೋತ್ಸವದಂದು ಏ. 11ರಂದು ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ತುಲಾಭಾರ ಸೇವೆಯು ಪ್ರಾರಂಭಗೊಂಡಿತು. ಬೆಳಗ್ಗಿನಿಂದಲೇ ಹರಕೆ ಹೊತ್ತ ಭಕ್ತಾಧಿಗಳು ದೇವಿ ಸನ್ನಿಧಿಯಲ್ಲಿ ನಂಬರ್ ಪ್ರಕಾರ ಸರಧಿ ಸಾಲಿನಲ್ಲಿ ತಮ್ಮ ತಮ್ಮ ಹರಕೆಯ ರೂಪದಲ್ಲಿ ಬೆಲ್ಲ, ಅಕ್ಕಿ, ಸೀಯಾಳ,ತೆಂಗಿನಕಾಯಿ,ಹೂವು,ಹಿಂಗಾರದಲ್ಲಿ ತುಲಾಭಾರ ಸೇವೆ ಮಾಡಿದರು .
ಸುಮಾರು 585 ಹರಕೆ ಹೊತ್ತ ಭಕ್ತಾಧಿಗಳು ತನ್ನ ಇಚ್ಚಾನುಸಾರ ಸೇವೆ ಸಲ್ಲಿಸಿದರು. ಚಿಕ್ಕ ಮಗುವಿನಿಂದ ಸುಮಾರು 90 ವರ್ಷದ ವರೆಗಿನ ತಮ್ಮ ಕಷ್ಟಗಳನ್ನು ದೇವಿಯಲ್ಲಿ ಹರಕೆ ಹೊತ್ತವರು ಸೇವೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ಪುನೀತರಾದರು. ದೇವಳದ ಅರ್ಚಕರು ದೇವಿಗೆ ಹಾಕುವ ಚಿನ್ನಾಭರಣಗಳನ್ನು ಹರಕೆ ಹೊತ್ತ ಭಕ್ತಾಧಿಗಳ ಕೊರಳಿಗೆ ಹಾಕಿ ತೂಕದಲ್ಲಿ ಕುಳ್ಳಿರಿಸಿ ತೂಕ ಮಾಡಿದರು. ದೇವಳದ ಪವಿತ್ರಪಾಣಿ ಮಾಧವ ಭಟ್, ದೇವಳದ ಅರ್ಚಕರಾದ ನಾರಾಯಣ ಭಟ್ , ಪರಮೇಶ್ವರ ಭಟ್,ಕೆ. ರಾಮ್‍ಭಟ್ ದೇವಳದ ಅರ್ಚಕರು ಹಾಗೂ ಸಿಬಂಧಿಗಳು ತುಲಭಾರ ಸೇವೆಯಲ್ಲಿ ಸಹಕರಿಸಿದರು. ದೇವಳದ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಮೋಕ್ತೇಸರ ತಾರಾನಾಥ ಆಳ್ವ, ರಾಮೇಶ್ ರಾವ್ ಚೇರಾ, ರಾಜೇಶ್ ನಾಯಕ್ ಉಳಿಪಾಡಿಗುತ್ತು, ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಹಾಗೂ ಕೃಷ್ಣಕುಮಾರ್ ಪೂಂಜ, ಶಿವಪ್ರಸಾದ್ ಶೆಟ್ಟಿ ಅಮ್ಮುಂಜೆ ಗುತ್ತು, ಮಹೇಶ್ ಚೌಟ ಉಳಿಪಾಡಿಗುತ್ತು, ಕೃಷ್ಣರಾಜ ಮಾರ್ಲ, ಸುಬ್ರಾಯ ಕಾರಂತ, ಸಂಪತ್ ಕುಮಾರ್ , ದೇವ್‍ದಾಸ್ ಶೆಟ್ಟಿ ಅಮ್ಮುಂಜೆಗುತ್ತು, ಸೋಮಶೆಖರ್ ಶೆಟ್ಟಿ ಅಮ್ಮುಂಜೆ ಗುತ್ತು, ರಂಗನಾಥ ಶೆಟ್ಟಿ ಅಮ್ಮುಂಜೆ ಗುತ್ತು, ಜೀವರಾಜ್ ಶೆಟ್ಟಿ ಅಮ್ಮುಂಜೆ ಗುತ್ತು, ವಿದ್ಯಾಚರಣ್ ಶೆಟ್ಟಿ, ಪವನ್ ಕುಮಾರ್ , ರಿತೇಶ್ ಮಾರ್ಲ ಮತ್ತಿತರರು ಉಪಸ್ಥಿತರಿದ್ದರು.







