ಬಂಟ್ವಾಳ: ಅವಳಿ ಜಿಲ್ಲೆಗಳಲ್ಲಿ ಹಿಂದೆಂದು ಕಾಣದಂತೆ ಸರಕಾರಿ ಉನ್ನತ ಅಧಿಕಾರಿಗಳ ಮೇಲೆ ಹಲ್ಲೆಗಳಾಗುತ್ತಿದ್ದರೂ ,ಅಧಿಕಾರಿಗಳಿಗೆ ಸ್ಥೆರ್ಯ ತುಂಬುವಂತ ಕೆಲಸವನ್ನು ಸರಕಾರ ಮಾಡುತ್ತಿಲ್ಲ ಎಂದು ಬಂಟ್ವಾಳ ಕ್ಷೇತ್ರ ಬಿಜೆಪಿ ಯುವ ಮೊಚಾ೯ ಅಧ್ಯಕ್ಷ ವಜ್ರನಾಭ ಕಲ್ಲಡ್ಕ ಆರೋಪಿಸಿದ್ದಾರೆ.ಮಂಗಳೂರಿನಲ್ಲಿ ಕತ೯ವ್ಯ ನಿರತ ಪೊಲೀಸ್ ಅಧಿಕಾರಿಗಳ ಹಾಗೂ ಉಡುಪಿ ಜಿಲ್ಲಾಧಿಕಾರಿ ಯವರ ಮೇಲೆ ನಡೆಸಿರುವ ಹಲ್ಲೆ ಯನ್ನು ಖಂಡಿಸಿರುವ ಅವರು ಮಂಗಳೂರಿನಲ್ಲಾಯಾದ ಘಟನೆಯ ಬಗ್ಗೆ ನ್ಯಾಯಾಂಗ ಇಲ್ಲವೆ ಸಿಐಡಿ ತನಿಖೆ ನಡೆಸುವಂತೆ ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ. ಪೋಲಿಸರ ತಪ್ಪುಗಳನ್ನು ಪಟ್ಟಿ ಮಾಡುತ್ತಿರುವ ಕಾಂಗ್ರೇಸ್ ನ ಲಜ್ಜೆಗೆಟ್ಟ ರಾಜಕಾರಣವನ್ನು ಜಿಲ್ಲೆಯ ಪ್ರಜ್ಞಾವಂತ ಜನತೆ ಕ್ಷಮಿಸಲಾರರು, ಕರ್ತವ್ಯದಲ್ಲಿರುವ ಜಿಲ್ಲಾಧಿಕಾರಿ, ಪೋಲಿಸ್ ಅಧಿಕಾರಿಗಳ ಮೇಲೆ ರಾಜರೋಷವಾಗಿ ಹಲ್ಲೆಯಾಗುತ್ತಿದ್ದರೆ ಜನಸಾಮಾನ್ಯರ ಪಾಡೇನು?ಎಂದು ಪ್ರಶ್ನಿಸಿರುವ ಅವರು ಈಘಟನೆಯಿಂದ ಜಿಲ್ಲೆಯಲ್ಲಿ ಭಯಭೀತ ವಾತವರಣ ಸೃಷ್ಠಿಯಾಗಿದ್ದು,ಈ ಸರಕಾರದಿಂದ ಜನಸಾಮಾನ್ಯರು ರಕ್ಷಣೆ ಬಯಸಲು ಸಾದ್ಯವೆ?ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈನಡುವೆ ಕಾಂಗ್ರೇಸ್ ಮುಸ್ಳಿಂ ಮುಖಂಡರು ಸಭೆ ಸೇರಿ ಹಲ್ಲೆಕೋರರ ಪರವಾಗಿ ವಕಾಲತ್ತ ವಹಿಸಿ ಗಡುವು ನೀಡುತ್ತಾರೆ ಎಂದಾದರೆ ಈ ಗಲಭೆಗಳ ಹಿಂದೆ ಯಾರಿದ್ದಾರೆ ಎಂಬುದು ಜಿಲ್ಲೆಯ ಜನತೆ ತಿಳಿಯುವಂತಾಯಿತು. ಚುನಾವಣೆ ಸಮೀಪಿಸುತ್ತಿದ್ದಾಗ ಕೋಮು ವೈಷಮ್ಯವನ್ನು ಬಿತ್ತಿ ಅಲ್ಪಸಂಖ್ಯಾತರನ್ನು ವೋಟು ಬ್ಯಾಂಕ್ ಮಾಡುತ್ತಿರುವ ಸಚಿವ ರಮಾನಾಥ ರೈಗಳ ಹಾಗೂ ಕಾಂಗ್ರೇಸನ ರಾಜಕೀಯ ಆಟಕ್ಕೆ ಪೋಲಿಸರನ್ನು ಬಲಿಪಶುಗಳಾಗಿ ಮಾಡುತ್ತಿರುವುದು ಖಂಡನೀಯವಾಗಿದೆ ಎಂದು ಪ್ರಜಿಕಟಣೆಯಲ್ಲಿ ತಿಳಿಸಿದ್ದಾರೆ. ಕರ್ತವ್ಯ ನಿರತ ಪೋಲಿಸ್ ಅಧಿಕಾರಿಯ ಮೇಲೆ ಮಾರಣಾಂತಿಕದಂತಹ ಹಲ್ಲೆ ಪ್ರಕರಣ ನಡೆದರೂ ಅಧಿಕಾರಿಗಳಿಗೆ ಸಾಂತ್ವಾನ ಕೂಡ ಹೇಳದಿರುವಂತ ಸಚಿವರು ಮತ್ತವರ ಪಕ್ಷದ ಒಲೈಕೆ ರಾಜಕಾರಣಕ್ಕೆ ಹಿಡಿದ ಕನ್ನಡಿಯಾಗಿದೆ ಎಂದುಅವರು ಟೀಕಿಸಿದ್ದಾರೆ.
