ಸುದ್ದಿ9 ಕೈಕಂಬ: ಗುರುಪುರ ಕಡೆಯಿಂದ ಮರಳು ತುಂಬಿಸಿಕೊಂಡು ಕೈಕಂಬ ಮೂಡಬಿದ್ರೆ ಕಡೆಗೆ ಸಾಗುತ್ತಿದ್ದ ಲಾರಿ (ಟಿಪ್ಪರ್ ) ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಬಿದ್ದ ಘಟನೆ ನಡೆದಿದೆ.
ಜು.18ರಂದು ಶುಕ್ರವಾರ ಬೆಳಗ್ಗೆ ಗುರುಪುರ ಕಡೆಯಿಂದ ಮರಳು ತುಂಬಿಸಿ ಕೊಂಡು ಬರುತ್ತಿದ್ದ ಟಿಪ್ಪರ್ ಕೈಕಂಬದ ರೋಸಾಮಿಸ್ತಿಕಾ ಕಾನ್ವೆಂಟ್ ಸಮೀಪ ಎದುರಿನಿಂದ ಬರುವ ವಾಹನಕ್ಕೆ ಸೈಡ್ ಕೊಟ್ಟ ಪರಿಣಾಮ ಬದಿಗೆ ಸರಿದಾಗ ಈ ಘಟನೆ ನಡೆದಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.


