ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ “ಗಾನ- ನೃತ್ಯ-ಸಂಭ್ರಮ” ಸೋಮವಾರ ಜರುಗಿತು. ಶಿವರಂಜಿನಿ ಮ್ಯೂಜಿಕಲ್ಸ್ ಪೊಳಲಿ ಹಾಗೂ ಶಿವರಂಜಿನಿ ಕಲಾ ಕೇಂದ್ರ ಪೊಳಲಿ ಇದರ ವಿದ್ಯಾರ್ಥಿಗಳಿಂದ ಭಕ್ತಿಗೀತೆಗಳು, ಜಾಣಪದ, ಭಾವಗೀತೆಗಳು, ಹಾಗೂ ಆಯ್ದ ಚಲನಚಿತ್ರಗೀತೆಗಳ ಕಾರ್ಯಕ್ರಮ ಜರುಗಿತು.




