ಸಾಧನೆಗೆಗಂಡು ಹೆಣ್ಣೆಂಬ ಬೇಧವಿಲ್ಲ ಎಂಬುವುದು ಲೋಕೋಕ್ತಿ, ಈ ಮಾತುಕರಾವಳಿಯ ಯಕ್ಷರಂಗದಅದ್ಭುತ ಪ್ರತಿಭೆಯ ಖನಿ ಅಪೂರ್ವಅರ್.ಸುರತ್ಕಲ್ಳ ವಿಷಯದಲ್ಲೂಅಕ್ಷರಶಃಸಾಬೀತಾಗಿದೆ.ಬಡತನದಲ್ಲಿಎರಡು ವಿಧಗಳಿದ್ದು ಒಂದು ಸಹಜವಾದಆರ್ಥಿಕ ಬಡತನವಾದರೆಇನ್ನೊಂದು ಮನಸ್ಸಿನ ಬಡತನ. ನಮ್ಮಲ್ಲಿರುವ ಕೀಳರಿಮೆಯನ್ನು ಬಿಟ್ಟು ಬದುಕಿನಲ್ಲಿಛಲ ಮತ್ತು ಸ್ಪಷ್ಟಗುರಿಯನ್ನುಇಟ್ಟುಕೊಂಡರೆಎನನ್ನಾದರೂ ಸಾಧಿಸಬಹುದೆಂದುಈ ಅಪೂರ್ವ ತೋರಿಸಿಕೊಟ್ಟಿದ್ದಾಳೆ.ಈಕೆಯ ಹೆಸರುಅಪೂರ್ವಆರ್ ಸುರತ್ಕಲ್.
ಈ ಪ್ರತಿಭೆಯ ಹೆತ್ತವರು ರಮೇಶ್ ಮತ್ತುರೂಪಾ ದಂಪತಿಗಳು.ಭರತನಾಟ್ಯ, ಸಂಗೀತ, ನೃತ್ಯ, ಚಿತ್ರಕಲೆ, ರಂಗೋಲಿ, ಶಿಕ್ಷಣ ಮತ್ತುಕ್ರೀಡೆಯಲ್ಲಿರಾಜ್ಯಮಟ್ಟದಲ್ಲಿ ಹೆಸರುಗಳಿಸಿದಾಕೆ.ಈಕೆಯಮತ್ತೊಂದುವಿಶೇಷ ಸಾಧನೆಯೆಂದರೆ ಕರಾವಳಿಯ ಗಂಡುಕಲೆಯೆಂದೇ ಹೆಸರು ಪಡೆದಯಕ್ಷಗಾನದಲ್ಲಿ ಹಿಮ್ಮೇಳದ ಚೆಂಡೆ ಮತ್ತು ಮದ್ದಲೆವಾದನದಲ್ಲಿಅದ್ಭುತಪರಿಣತಿಯನ್ನು ಸಾಧಿಸಿರುವುದು.
ಯಕ್ಷಗಾನದಲ್ಲಿಎರಡು ಪ್ರಕಾರಗಳಿದ್ದು, ಒಂದನೆಯದುತೆಂಕುತಿಟ್ಟು,ಇನ್ನೊಂದುಬಡಗುತಿಟ್ಟು.ಯಕ್ಷಗಾನಎಂದಾಗಥಟ್ಟನೆ ನೆನಪಿಗೆ ಬರುವುದುಚೆಂಡೆಯಅದ್ಭುತ ಶಬ್ದ, ವಿಭಿನ್ನವಾದ ವೇಷಭೂಷಣಗಳು ಮತ್ತುಅದ್ಭುತ ನಾಟ್ಯ.ಯಕ್ಷಲೋಕದಲ್ಲಿ ವಿಶೇಷವಾದ ಸಾಧನೆಯನ್ನು ಮಾಡಿದವರಲ್ಲಿ ಹೆಚ್ಚಿನವರೆಲ್ಲರೂ ಪುರುಷರೇಎಂದರೆಅತಿಶಯೋಕ್ತಿಯಾಗಲಾರದು.ಇದಕ್ಕೆಕಾರಣವೂಇಲ್ಲದಿಲ್ಲ, ರಾತ್ರಿಯಿಂದ ಮೊದಲ್ಗೊಂಡು ಬೆಳಗ್ಗಿನವರೆಗೂ ಪ್ರದರ್ಶನ ನಡೆಯುವುದರಿಂದರಾತ್ರಿಯಿಡೀ ನಿದ್ದೆ ಬಿಡಬೇಕಾದ ಅನಿವಾರ್ಯತೆಯೂಇದೆ.ಈ ರಂಗದಲ್ಲಿಸಾಧನೆಯನ್ನೇನಾದರೂ ಮಾಡಬೇಕೆಂದರೆಕಠಿಣ ಪರಿಶ್ರಮದೊಂದಿಗೆಆತ್ಮಸ್ಥೈರ್ಯವೂಉನ್ನತ ಮಟ್ಟದಲ್ಲಿರಬೇಕು.ಅದ್ದರಿಂದ ಈ ಕ್ಷೇತ್ರದಲ್ಲಿ ಮಹಿಳಾ ಸಾಧಕರು ಕಾಣಸಿಗುವುದುಅತ್ಯಂತವಿರಳವೆಂದು ಹೇಳಬಹುದು.ಇಂತಹ ಸವಾಲಿನ ಕ್ಷೇತ್ರವನ್ನೇಆಯ್ದುಕೊಂಡುಇಲ್ಲೇ ಸಾಧನೆಯನ್ನು ಮಾಡಿರುವುದು ವಿಶೇಷ. ಯಕ್ಷಗಾನದಲ್ಲಿ ಹಲವಾರು ಮಹಿಳಾ ಪಾತ್ರಧಾರಿಗಳು ಮತ್ತು ಭಾಗವತರು ಸಾಧನೆಯನ್ನು ಮಾಡಿರಬಹುದು.ಆದರೆಚೆಂಡೆವಾದನದಕ್ಷೇತ್ರದಲ್ಲಿ ಮಹಿಳಾ ಸಾಧಕಿಯರುಕಾಣ ಸಿಗುವುದು ಅತ್ಯಂತ ವಿರಳವೆಂದೇ ಹೇಳಬಹುದು.

ತೆಂಕುತಿಟ್ಟುಯಕ್ಷಗಾನ ಪ್ರಕಾರದಲ್ಲಿಚೆಂಡೆಗೆ ಹೆಚ್ಚಿನ ಪ್ರಾಶಸ್ತ್ಯವಿದ್ದು, ಸುಮಾರುಎರಡರಿಂದ ಮೂರುಕೆ.ಜಿತೂಗುವಚೆಂಡೆಯನ್ನು ಹೆಗಲೇರಿಸಿ ಅದನ್ನು ನಿಂತುಕೊಂಡೇ ಬಾರಿಸುವುದರ ಮೂಲಕ ಪಾತ್ರಧಾರಿಧಾರಿಗೆ ಸ್ಪೂರ್ತಿತುಂಬುವಈ ಕೆಲಸವಿಶೇಷ ಸವಾಲಿನಿಂದಕೂಡಿರುವುದು ಸುಳ್ಳಲ್ಲ. ಯಕ್ಷಗಾನದಲ್ಲಿಕಲಾವಿದರು ಮತ್ತುಚೆಂಡೆವಾದಕರ ನಡುವಿನ ಪೈಪೋಟಿಎಂದೇ ಹೇಳಬಹುದು. ಕುಣಿತದಲ್ಲಿಕಲಾವಿದನಿಗೆ ಪ್ರೇಕ್ಷಕರ ಶಿಳ್ಳೆ ಮತ್ತು ಚಪ್ಪಾಳೆಗಳು ಬಿತ್ತೆಂದರೆ ಸಾಕು ಕಲಾವಿದಚೆಂಡೆವಾದಕನನ್ನು ಸುಸ್ತಾಗಿಸಲು ನೋಡುತ್ತಾನೆ. ಆದ್ದರಿಂದಲೇಯಕ್ಷಗಾನದಲ್ಲಿಚೆಂಡೆವಾದನಕ್ಷೇತ್ರದಲ್ಲಿ ಗೆಲುವಿನೊಂದಿಗೆ ಸಾಧನೆಯನ್ನು ಮಾಡುವುದು ಕಷ್ಟ ಎನ್ನಬಹುದು.ಇಂತಹಒಂದುಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ನಿರ್ಧಾರವನ್ನು ಮಾಡಿದ ಅಪೂರ್ವಳ ಆತ್ಮಸ್ಥೈರ್ಯವನ್ನು ಮೆಚ್ಚಲೇಬೇಕು.
ಈ ಬಹುಮುಖ ಪ್ರತಿಭೆಗೆತಂದೆಯೇ ಪ್ರೇರಣೆ:
ಅಪೂರ್ವ ಸುರತ್ಕಲ್ ಹುಟ್ಟು ಪ್ರತಿಭೆಯಖನಿಯಾಗಿದ್ದು, ತನ್ನಎರಡನೆಯತರಗತಿಯಲ್ಲೇ ಸುರತ್ಕಲ್ನವಿದ್ವಾನ್ಚಂದ್ರಶೇಖರ ನಾವುಡರಿಂದಭರತನಾಟ್ಯಕಲಾ ದೀಕ್ಷೆಯನ್ನು ಪಡೆದು, ಭರತನಾಟ್ಯಜ್ಯೂನಿಯರ್ನಲ್ಲಿ 81% ಅಂಕವನ್ನುಮತ್ತು ಸಿನಿಯರ್ನಲ್ಲಿ 75% ಅಂಕದೊಂದಿಗೆ ಪೂರ್ಣಗೊಳಿಸಿದ್ದಾಳೆ.ಭರತನಾಟ್ಯಕಲಾವಿದೆಯಾಗಿರುವ ಅಪೂರ್ವಳ ಅಸಕ್ತಿಯುಯಕ್ಷಗಾನದೆಡೆಗೆತಿರುಗಲು ಪ್ರಮುಖ ಪ್ರೇರಣೆಈಕೆಯತಂದೆಯೇಆಗಿದ್ದು, ಸ್ವತಃಇವರೊಬ್ಬ ಕಲಾ ಸೇವಕರಾಗಿದ್ದಾರೆ.ಇವರುದೇವರ ಮೆರವಣಿಗೆ ಮತ್ತುದೇವರ ಪ್ರದಕ್ಷಿಣೆಯಲ್ಲಿತಂದೆಯುಚೆಂಡೆವಾದನಗೈಯುವ ಮೂಲಕ ಕಲಾ ಸೇವೆಯನ್ನು ಮಾಡುತ್ತಾರೆ.ಬೃಹತ್ಕಿರೀಟತೊಟ್ಟಆರ್ಭಟಿಸುವರಾಕ್ಷಸನಪಾತ್ರಧಾರಿಯಾಗಿ, ನಾಟಕದಲ್ಲಿಅಪ್ರತಿಮ ಪಾತ್ರಧಾರಿಯಾಗಿಹೀಗೆ ರಮೇಶ್ರವರುಬಹುಮುಖ ಪ್ರತಿಭೆ.ತಂದೆಯಯಕ್ಷಗಾನದಲ್ಲಿನ ಪಾತ್ರಗಳು ಮತ್ತುದೇವರ ಮೆರವಣಿಗೆಯ ಸಂದರ್ಭದಚೆಂಡೆವಾದನವನ್ನು ಎಳವೆಯಿಂದಲೇ ನೋಡುತ್ತಾ ಬೆಳೆದ ಅಪೂವಾಳ ಅಸಕ್ತಿಯುಚೆಂಡೆವಾದನದೆಡೆಗೆತಿರುಗಿದ್ದೂ ವಿಶೇಷವೇ. ತಾಯಿರೂಪಾರವರೂಮದ್ದಲೆ ವಾದನವನ್ನುಕಲಿತಿದ್ದಾರೆÉ. ದ್ವಿತೀಯ ಪಿಯುಸಿ ಓದುತ್ತಿರುವ ಸಹೋದರಅಮೋಘ ಸುರತ್ಕಲ್ ಸಹ ಚೆಂಡೆ ಮತ್ತು ಮದ್ದಲೆವಾದನದಲ್ಲಿಪರಿಣತಿಯನ್ನು ಹೊಂದಿದ್ದು ಹವ್ಯಾಸಿ ಹಿಮ್ಮೇಳ ವಾದಕರಾಗಿದ್ದಾರೆ.ಇವರಕುಟುಂಬಪೂರ್ತಿಕಲಾರಾಧಕರಿಂದಕೂಡಿದ್ದು, ಕಲೆ ಮತ್ತುಕೌಶಲ್ಯಎಂಬುವುದು ಈಕೆಗೆ ತನ್ನ ಹೆತ್ತವರಿಂದಹುಟ್ಟುತ್ತಲೇರಕ್ತದಲ್ಲೇ ಬಂದಿದೆಎನ್ನಬಹುದು.
ತಂದೆಯಿಂದಲೇ ಪ್ರೇರಿತಳಾದ ಈಕೆ 2005ರ ಜನವರಿಯಲ್ಲಿತನ್ನ 5ನೇತರಗತಿಯಲ್ಲೇಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ರವರಿಂದವಾದ್ದಲೆವಾದನವನ್ನುಕಲಿತುತನ್ನಆರನೆಯತರಗತಿಯಲ್ಲೇ ವಿಶೇಷ ಕೌಶಲ್ಯ ಮತ್ತು ಕೈಚಳಕದ ಅವಶ್ಯಕತೆಯಿರುವಚೆಂಡೆವಾದನವನ್ನು ಅಭ್ಯಸಿಸುತ್ತಾರೆ.ಜತೆಜತೆಗೆ ಈಕೆ ಅದ್ಭುತಚಿತ್ರಗಾರ್ತಿಯೂ ಹೌದು.ಪ್ರಸಿದ್ಧ ಯಕ್ಷಗಾನ ಮೇಳಗಳಾದ ಕಟೀಲು ಮತ್ತು ಧರ್ಮಸ್ಥಳ ಮೇಳಗಳ ಪ್ರದರ್ಶನಗಳಲ್ಲಿ ಹಿರಿಯಕಲಾವಿದರಿಗೂಚೆಂಡವಾದನವನ್ನು ಮಾಡಿಅವರಿಂದಲೂ ಶಹಬ್ಬಾಸ್ ಗಿಟ್ಟಿಸಿಕೊಂಡಿದ್ದಾಳೆ.ಯಕ್ಷಗಾನದಲ್ಲಿ ಈಕೆಗೆ ಶಿವಪ್ರಸಾದ್ ಬಲಿಪ, ವಾಸುದೇವರಾವ್ ಸುರತ್ಕಲ್, ವಾದಿರಾಜಕಲ್ಲೂರಾಯ, ನಿಡ್ಲೆಗೋವಿಂದ ಭಟ್, ಯುವ ಮಹಿಳಾ ಭಾಗವತೆ ಭವ್ಯಶ್ರೀ ಮಂಡೆಕೋಲು ಮೊದಲಾದ ಸಾಧಕರ ಸಮರ್ಪಕ ಮಾರ್ಗದರ್ಶನದೊಂದಿಗೆಕಲಾಶೀರ್ವಾಧ ದೊರೆತಿದೆ.ಈಕೆಯ ಪ್ರದರ್ಶನಗಳನ್ನು ಕಂಡು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ.ವೀರೇಂದ್ರ ಹೆಗ್ಗಡೆ, ಸಂಗೀತ ನಿರ್ದೆಶಕಗುರುಕಿರಣ್, ಯಕ್ಷಲೋಕದ ಹಿರಿಯರಾದಕುಂಬ್ಳೆ ಸುಂದರ್ರಾವ್, ಡಾ|| ಎಂ.ಪ್ರಭಾಕರ ಜೋಶಿ ಮತ್ತುಬಲಿಪ ನಾರಾಯಣ ಭಾಗವತರಿಂದ ಪ್ರಶಂಸೆಯುಸಂದಿವೆ.
ಬಹುಮುಖ ಪ್ರತಿಭೆ ಈಕೆ:
15.03.1996ರಂದು ಸುರತ್ಕಲ್ನಶ್ರೀರಮೇಶ್ಮತ್ತು ಶ್ರೀಮತಿ ರೂಪಾ ದಂಪತಿಗಳ ಪ್ರಥಮಪುತ್ರಿಯಾಗಿ ಜನಿಸಿದ ಅಪೂರ್ವತನ್ನ ಪ್ರಾಥಮಿಕ ಶಿಕ್ಷಣವನ್ನು ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆ ಸುರತ್ಕಲ್ನಲ್ಲಿ ಮುಗಿಸಿ, ಪ್ರೌಢ ಶಿಕ್ಷಣವನ್ನು ವಿದ್ಯಾದಾಯಿನಿ ಪ್ರೌಢ ಶಾಲೆಯಲ್ಲಿ 94% ಅಂಕಗಳೊಂದಿಗೆ ಪೂರೈಸಿ, ಕಲೆಯಜೊತೆಜೊತೆಗೆ ಶಿಕ್ಷಣ ಕ್ಷೇತ್ರದಲ್ಲೂಅದ್ಭುತ ಸಾಧನೆಗೈದ ಈಕೆ ಅಪೂರ್ವಳೇ ಹೌದು. ಪದವಿಪೂರ್ವ ಶಿಕ್ಷಣವನ್ನು ಗೋವಿಂದದಾಸಕಾಲೇಜಿನಲ್ಲಿ90% ಅಂಕಗಳೊಂದಿಗೆ ಮತ್ತುಇದೇಕಾಲೇಜಿನಲ್ಲಿ ಬಿ.ಎಸ್ಸಿ ಪದವಿಯನ್ನು94% ಅಂಕಗಳೊಂದಿಗೆ ಪೂರ್ಣಗೊಳಿಸಿದ್ದಾಳೆ.ಸಧ್ಯಅಲೋಶಿಯಸ್ ಕಾಲೇಜು ಮಂಗಳೂರಿನಲ್ಲಿ ಎಮ್.ಎಸ್ಸಿ ಗಣಿತಶಾಸ್ತ್ರಕಲಿಯುತ್ತಿರುವ ಈಕೆ 2010ರ ಅಂತರಾಷ್ಟ್ರೀಯ ವಿಜ್ಞಾನ ಮತ್ತುಗಣಿತ ಪ್ರತಿಭಾ ಪರೀಕ್ಷೆಯಲ್ಲಿರಾಜ್ಯಕ್ಕೆ 5ನೇ ರ್ಯಾಂಕ್, 2010ರ ಅಂತರಾಷ್ಟ್ರೀಯ ಮಟ್ಟದಗಣಿತ ಪ್ರತಿಭಾ ಸ್ಪರ್ಧೆಯಲ್ಲಿರಾಜ್ಯ ಮಟ್ಟದಲ್ಲಿ 4ನೇ ರ್ಯಾಂಕ್ ಮತ್ತು 2009ರ ಪುಟಾಣಿ ವಿಜ್ಞಾನ ಪರೀಕ್ಷೆಯಲ್ಲಿಜಿಲ್ಲಾ ಮಟ್ಟದಲ್ಲಿ 6ನೇ ರ್ಯಾಂಕ್ಪಡೆದ ಸಾಧಕಿ. ಜಿಲ್ಲೆ ಮತ್ತುರಾಜ್ಯ ಮಟ್ಟದ ಭರತನಾಟ್ಯ, ಚಿತ್ರಕಲೆ, ರಂಗೋಲಿ ಮತ್ತುಛದ್ಮವೇಷ ಸ್ಪರ್ಧೆಗಳಲ್ಲಿ ಸುಮಾರು 100ಕ್ಕೂ ಮಿಕ್ಕಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.ಶ್ರಿಮತಿ ಮನೋರಂಜಿನಿ ಇವರಿಂದಚಿತ್ರಕಲೆಯ ವಿವಿಧ ಆಯಾಮಗಳನ್ನು ಅರಿತುಕೊಂಡು‘ಬಲ್ಲಿರೇನಯ್ಯ’ಯಕ್ಷಗಾನ ಮಾಸಪತ್ರಿಕೆಯಚಿತ್ರಕಥೆಗೆಚಿತ್ರ ರಚಿಸಿದ ಹೆಗ್ಗಳಿಕೆ ಈಕೆಯದ್ದು.ಎನ್.ಎಸ್.ಎಸ್ನಲ್ಲಿ ಸಕ್ರಿಯಕಾರ್ಯಕರ್ತೆಯಾಗಿ ಮತ್ತುಇಂಟರಾಕ್ಟ್ಹಾಗೂ ರೊಟರಾಕ್ಟ್ ಕ್ಲಬ್ಗಳಲ್ಲಿ ಅಧ್ಯಕ್ಷೆಯಾಗಿಕರ್ತವ್ಯ ನಿರ್ವಹಿಸಿದ ಬಹುಮುಖ ಪ್ರತಿಭೆ ಈಕೆ.
ಈಕೆ ಹೆಚ್ಚಿನ ಹಿಮ್ಮೇಳ ಪ್ರದರ್ಶನಗಳನ್ನು ತನ್ನ ಎಳೆಯ ವಯಸ್ಸಿನಲ್ಲೇ ಚೆಂಡೆವಾದನವೇ ಪ್ರಾಶಸ್ತ್ಯವನ್ನು ಪಡೆದಿರುವತೆಂಕುತಿಟ್ಟಿನಲ್ಲೇ ನೀಡಿದ್ದುಈಕೆಯ ವಿಶೇಷತೆ.ಮಹಾನ್ಕಲಾವಿದಾರಾದ ಬಲಿಪ ನಾರಾಯಣ ಭಾಗವತ, ಕುಂಬ್ಳೆ ಸುಂದರ್ರಾವ್, ಡಾ|| ಎಂ. ಪ್ರಭಾಕರಜೋಶಿ, ಪದ್ಯಾಣಗಣಪತಿ ಭಟ್, ಸುಬ್ರಹ್ಮಣ್ಯಧಾರೇಶ್ವರ ಮುಂತಾದ ಮಹಾನ್ ಸಾಧÀಕರುಭಾಗವಹಿಸಿದ ತಾಳಮದ್ದಲೆಗಳಲ್ಲಿ, ಮಹಿಳಾ ಯಕ್ಷಗಾನಗಳಲ್ಲಿ ಮತ್ತುಮೈಸೂರಿನರಂಗಾಯಣದಲ್ಲಿ ವಿವಿಧ ಕಾರ್ಯಕ್ರಮಗಳು ಇವೇ ಮೊದಲಾದ ಸುಮಾರು350ಕ್ಕೂ ಮಿಕ್ಕಿದರಾಜ್ಯ ಹಾಗೂ ಹೊರ ರಾಜ್ಯಗಳ ಕಾರ್ಯಕ್ರಮದಲ್ಲಿಚೆಂಡೆ ಮತ್ತು ಮದ್ದಲೆವಾದನಗೈದ ಹಿರಿಮೆಈಕೆಯದ್ದು. ಈಕೆ ಸುಂಕದಕಟ್ಟೆ ಮೇಳ, ಶ್ರಿ ಧರ್ಮಸ್ಥಳ ಮಂಜುನಾಥೇಶ್ವರಯಕ್ಷಗಾನ ಮಂಡಳಿ, ಶ್ರೀ ದುರ್ಗಾಪರಮೇಶ್ವರಿಯಕ್ಷಗಾನಮಂಡಳಿ ಕಟೀಲು, ಶ್ರೀ ಮಹಾಗಣಪತಿಯಕ್ಷಗಾನ ಮಂಡಳಿ ನಿಡ್ಲೆ, ಹಾಗೂ ಶ್ರಿ ವಾಸುದೇವರಾವ್ ನೇತೃತ್ವದದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ ತಂಡಬೈಲ್ ಇವೇ ಮೊದಲದ ಮೇಳಗಳಲ್ಲಿ ಹವ್ಯಾಸಿ ಹಿಮ್ಮೇಳ ವಾದಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆಅಪೂರ್ವಾ.
ಈಕೆಯ ಸಾಧನೆಗೆ ಸಂದ ಪ್ರಶಸ್ತಿಗಳು:
ಈಕೆಯ ಸಾಧನೆಯನ್ನುಕಂಡ ಅನೇಕ ಸಂಘ ಸಂಸ್ಥೆಗಳು ಈಕೆಗೆ ಹಲವಾರು ಪ್ರಶಸ್ತಿ ಹಾಗೂ ಸನ್ಮಾನವನ್ನು ಮಾಡಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ,
ದ.ಕಜಿಲ್ಲಾ ಸಾಹಿತ್ಯ ಪರಿಷತ್ತು ಹಿಮ್ಮೇಳನವಾದನಕ್ಕೆ ರಾಜ್ಯೋತ್ಸವ ಸಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಶ್ರೀ ಕೃಷ್ಣ ಯಕ್ಷ ಸಭಾ ಏರ್ಪಡಿಸಿದ ಯಕ್ಷಗಾನ ಸಪ್ತಾಹ ಕಾರ್ಯಕ್ರಮದಲ್ಲಿಯಕ್ಷರಂಗದ ಸಾಧನೆಗೆ ಸನ್ಮಾನ.
2012ರಲ್ಲಿ ಶ್ರೀ ಜ್ಞಾನಮಂದಾರ ಶೈಕ್ಷಣಿಕ ಮತ್ತು ಸಾಂಸ್ಕøತಿಕಟ್ರಸ್ಟ್ ಬೆಂಗಳೂರು ಇವರಿಂದಜ್ಞಾನಶ್ರೀ ಪ್ರಶಸ್ತಿ.
ಕಲಾಸಂಗಮ ಸಾಂಸ್ಕøತಿಕ ವೇದಿಕೆ ಮಂಗಳೂರು ಇವರಿಂದಕಲಾಸಂಗಮ ಪುರಸ್ಕಾರ.
ಶ್ರೀ ರಾಮನಾಥ ಸಾಂಸ್ಕøತಿಕ ಭವನಕಾಸರಗೋಡುಇವರಿಂದಅಭಿನಂದನೆ.
2012ರ ಕೇರಳ ರಾಜ್ಯಕನ್ನಡ ಸಮ್ಮೆಳನ ಮತ್ತು ಕೇರಳ ಮತ್ತುಕರ್ನಾಟಕಉತ್ಸವದಲ್ಲಿ ಸನ್ಮಾನ.
ಯಕ್ಷಗಾನ ಕಲಾಮಂಡಳಿ ಪಣಂಬೂರುಇವರಿಂದ ಸಂಕ್ರಾಂತಿಉತ್ಸವ 2011 ರ ಅಂಗವಾಗಿ ಪ್ರತಿಭಾ ಪುರಸ್ಕಾರ.
ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಕಾಸರಗೋಡುಇವರಿಂದಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಪ್ರಶಸ್ತಿ.
2016ರ ಮುಂಬಯಿಯಯಕ್ಷಗಾನ ಸಾಹಿತ್ಯ ಸಮ್ಮೇಳನದಲ್ಲಿ ಪದವೀಧರಯಕ್ಷಗಾನ ಸಮಿತಿಯಿಂದಪ್ರತಿಭಾ ಪುರಸ್ಕಾರದೊರೆತಿದೆ.
ಆಧುನಿಕತೆಯ ವೇಗದಅಬ್ಬರಕ್ಕೆ ಸಿಲುಕಿರುವ ಇಂದಿನ ಯುವಜನಾಂಗತಮ್ಮ ಸಾಂಪ್ರದಾಯಿಕ ಕಲೆಗಳನ್ನು ಸಂಪೂರ್ಣವಾಗಿ ಮರೆತೇ ಬಿಟ್ಟಿದ್ದು, ಕಲೆಯ ಪೋಷಣೆಇಂದುಅವಸಾನದಅಂಚಿನಲ್ಲಿದೆಎಂದೇ ಹೇಳಬಹುದು. ಇಂತಹ ದಿನಗಳಲ್ಲಿ ಸವಾಲಿನ ಕ್ಷೇತ್ರದಲ್ಲಿಯೇತಾನೂ ಮಿಂಚಬೇಕೆಂದು ಹಂಬಲಿಸಿ ಆ ಕ್ಷೇತ್ರದಲ್ಲಿ ಸಾಧನೆಗೈಯುವಲ್ಲಿ ಪ್ರೋತ್ಸಾಹವನ್ನು ನೀಡಿ ಮುಂದಿನ ತಲೆಮಾರಿಗೂಕಲೆಯನ್ನು ಉಳಿಸಿ ಬೆಳೆಸುವಲ್ಲಿ ಸಹಕಾರವನ್ನು ನೀಡುತ್ತಿರುವಕುಟುಂಬಕ್ಕೆ ಮತ್ತುಕಲಾರಾಧನೆಯನ್ನು ವಿಭಿನ್ನವಾಗಿ ಮಾಡುತ್ತಿರುವ ಪ್ರತಿಭೆ ಅಪೂರ್ವಾಳಿಂದ ಪ್ರೇರಿತರಾಗಿಇನ್ನಷ್ಟು ಸಾಧಕರುಬೆಳೆಯಲೆಂದು ಆಶಿಸೋಣ.
ಸಂತೋಷ್ರಾವ್ ಪೆರ್ಮುಡ
ದೂ: 9742884160
ಚಿತ್ರಗಳು: ಸಂದೀಪ್ಕೆ. ಬಳ್ಳಾಲ್



