ಬಂಟ್ವಾಳ: ತುಂಬೆ ಹೊಸ ವೆಂಟೆಡ್ ಡ್ಯಾಂ ಮತ್ತು ಶಂಭೂರು ಎ.ಎಂ.ಆರ್. ಡ್ಯಾಂನಲ್ಲಿ ಧಾರಾಳ ಕುಡಿಯುವ ನೀರಿದ್ದರೂ ಮಂಗಳೂರು ನಗರದಲ್ಲಿ ಕೃತಕ ನೀರಿನ ಅಭಾವ ಸೃಷ್ಟಿಸುವ ಮೂಲಕ ಟ್ಯಾಂಕರ್ ಮಾಫಿಯಾದ ಹಣಗಳಿಸುವ ದಂಧೆಗೆ ಮನಪಾ ಆಡಳಿತ ಮತ್ತು ಅಧಿಕಾರಿಗಳು ನೆರವಾಗುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

DSC_0683
ತುಂಬೆ ಡ್ಯಾಂನಲ್ಲಿ ಧಾರಾಳ ನೀರಿದ್ದರೂ ಮಂಗಳೂರು ನಗರಕ್ಕೆ ಎರಡು ದಿನಗಳಿಗೊಮ್ಮೆ ನೀರು ಪೂರೈಸುವ ಆದೇಶವನ್ನು ಮನಪಾ ನೀಡಿದೆ. ಮನಪಾದ ಈ ಆದೇಶದಿಂದ ಮಂಗಳೂರಿನಲ್ಲಿ ಕೃತಕ ನೀರಿನ ಅಭಾವ ಉಂಟಾಗಿದೆ. ಇದನ್ನೇ ಲಾಭವನ್ನಾಗಿಸಿರುವ ಟ್ಯಾಂಕರ್ ಮಾಲಕರು ತುಂಬೆ ಡ್ಯಾಂನಲ್ಲಿ ನೀರಿಲ್ಲ ಎಂಬ ಗುಮ್ಮವನ್ನು ಹಬ್ಬಿಸಿ ಹೊಟೇಲ್, ಫ್ಲಾಟ್, ಲಾಡ್ಜ್, ನಿರ್ಮಾಣ ಕೆಲಸಕ್ಕೆ ದುಪಟ್ಟು ಹಣಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದಾರೆ.

DSC_0682
ಮಾ. 31ರಂದು (ಇಂದು) ತುಂಬೆ ವೆಂಟೆಡ್ ಡ್ಯಾಂನಲ್ಲಿ 5 ಮೀಟರ್ ನೀರಿದೆ. ಶಂಭೂರು ಎ.ಎಂ.ಆರ್. ಡ್ಯಾಂನಲ್ಲಿ 17.90 ಮೀಟರ್ ನೀರು ಇದೆ. ಪ್ರಸ್ತುತ ಎರಡೂ ಡ್ಯಾಂನಲ್ಲಿ ಸುಮಾರು 3ರಿಂದ 4 ತಿಂಗಳಿಗೆ ಸಾಕಾಗಬಹುದಾದಷ್ಟು ನೀರು ಇದೆ. ಹೀಗಿದ್ದರೂ ಮಂಗಳೂರು ನಗರಕ್ಕೆ ಎರಡು ದಿನಗಳಿಗೊಮ್ಮೆ ನೀರು ಪೂರೈಸುವ ನಿರ್ಧಾರವನ್ನು ಮನಪಾ ತೆಗೆದುಕೊಂಡಿರುವುದು ಏಕೆ? ಎಂಬ ಪ್ರಶ್ನೆ ಸಾರ್ವಜನಿಕ ವಲಯಲ್ಲಿ ಕೇಳಿ ಬರುತ್ತಿದೆ.
ಹೊಸ ಡ್ಯಾಂನಲ್ಲಿ 5 ಮೀಟರ್ ನೀರಿದೆ. ನೀರಿನ ಬಗ್ಗೆ ಮಂಗಳೂರಿನ ಜನರಲ್ಲಿ ಜಾಗೃತಿ ಮಾಡುವುದೇ ಆದರೆ ಹಳೆ ಡ್ಯಾಂನ 4 ಮೀಟರ್‍ಗೆ ಖಾಲಿಯಾದ ಮೇಲೆ ಮಾಡಲಿ. ಅದು ಬಿಟ್ಟು ಈಗಲೇ ನೀರು ಸ್ಥಗಿತಗೊಳಿಸುವುದು ಎಷ್ಟು ಸರಿ? ಡ್ಯಾಂನಲ್ಲಿ ಧಾರಾಳ ನೀರಿದ್ದರೂ ಎರಡು ದಿನಗಳಿಗೊಮ್ಮೆ ನೀರು ಪೂರೈಸುವ ಮೂಲಕ ಕುಡಿಯುವ ನೀರು ಪೂರೈಸುವ ಟ್ಯಾಂಕರ್ ಮಾಫಿಯಾಕ್ಕೆ ನೆರವಾಗಲು ಮನಪಾ ಮಂಗಳೂರಿಗೆ ಎರಡು ದಿನಗಳಿಗೊಮ್ಮೆ ನೀರು ಪೂರೈಸುತ್ತಿದೆ.

By suddi9

Leave a Reply

Your email address will not be published. Required fields are marked *