ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಚಿಗುರು” ಎಂಬ ನಾಮಾಂಕಿತದ ಬೇಸಿಗೆ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಗುರುವಾರ ನಡೆಯಿತು.ಉದ್ಯಮಿ ಜಯಾನಂದ ಆಚಾರ್ಯ ಹೊಂಬಾಳೆ ಅರಳಿಸಿದರೆ ಕೆ.ಎಸ್.ಆರ್.ಟಿ.ಸಿ ಬಸ್ಸು ಚಾಲಕರಾಗಿರುವ ದಯಾನಂದ ಗಿಡಕ್ಕೆ ನೀರು ಎರೆಯುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.

ವಿದ್ಯಾರ್ಥಿಗಳಾದ ಖುಷಿ ಹಾಗೂ ವಿಂದ್ಯಾಶ್ರೀ ಬಣ್ಣವನ್ನು ಎರೆಚುವ ಮೂಲಕ ಭಿತ್ತಿಪತ್ರ ಅನಾವರಣಗೊಳಿದರು.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನ್ಯಾಯವಾದಿ ಶಿವಗಿರಿ ಸತೀಶ್ ಭಟ್ ಶಿಬಿರದಲ್ಲಿ ನಡೆಯುವ ವಿವಿಧ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಉತ್ತಮರೀತಿಯಲ್ಲಿ ಭಾಗವಹಿಸಿ ಶಿಬಿರದ ನಾಮಾದೇಯದಂತೆ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳು ಚಿಗುರಲಿ ಎಂದು ಶುಭಹಾರೈಸಿದರು.ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರವಿರಾಜ್‍ಕಣಂತೂರು ಉಪಸ್ಥಿತರಿದ್ದರು.ವಿದ್ಯಾರ್ಥಿಗಳಾದ ಸೌಭಾಗ್ಯ ನಿರೂಪಿಸಿ, ವಾತ್ಸಲ್ಯಸ್ವಾಗತಿಸಿದರು
