ಬಂಟ್ವಾಳ: ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವತಿಯಿಂದ ಸ್ವಚ್ಛ ಭಾರತ ಪ್ರಯುಕ್ತ ಅಂತರ್ ಕಾಲೇಜ್ ಮಟ್ಟದ ವಿದ್ಯಾರ್ಥಿಗಳ ಬೀದಿನಾಟಕ ನಡೆಯಿತು. ಅಳಿಕೆ ಶಾಲೆ ನಿವೃತ್ತ ಮುಖ್ಯ ಶಿಕ್ಷಕ ಯಶೋಧರ ಬಂಗೇರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದೇವರು, ಮನೆ, ಸಮಾಜ ಇವುಗಳ ಸೇವೆ ಮಾಡಬೇಕು. ವಿದ್ಯಾರ್ಥಿಗಳಿಂದ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಾರ್ಯ ನಡೆಯಬೇಕು. ಮನೆಯಿಂದಲೇ ಈ ಕಾರ್ಯ ನಡೆಯಬೇಕು ಎಂದು ತಿಳಿಸಿದರು. 
ಬೆಟ್ಟಪ್ಪಾಡಿ, ಕನ್ಯಾನ, ಮುಡಿಪು, ವಾಮದಪದವು, ಬೆಳ್ಳಾರೆ ಕಾಲೇಜಿನ ವಿದ್ಯಾರ್ಥಿಗಳು ಬೀದಿನಾಟಕದಲ್ಲಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಶಂಕರ್ ಪಾಟಾಲಿ ಅಧ್ಯಕ್ಷತೆ ವಹಿಸಿದ್ದರು. ವಿಟ್ಲ ವಿಠಲ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ, ಮುಡಿಪು ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಡಾ. ಗಿರಿಧರ್, ಕಾಲೇಜ್ ಅಭಿವೃದ್ಧಿ ಸಮಿತಿ ಸದಸ್ಯ ಸಿ.ಎಫ್ ಸಿಕ್ವೇರಾ, ಅತಿಥಿ ಉಪನ್ಯಾಸಕ ಜಾನ್ ಡಿಸೋಜ, ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಸಂತೋಷ್ ಉಪಸ್ಥಿತರಿದ್ದರು.ಜನನಿ ಸ್ವಾಗತಿಸಿದರು. ಲಿಖಿತಾ ಹಾಗೂ ದಿವ್ಯಾ ನಿರೂಪಿಸಿದರು.
