ಮೂಡುಬಿದಿರೆ: ರೋಟರಿ ಎಜ್ಯುಕೇಶನ್ ಸೊಸೈಟಿ (1980)ಯ ಸ್ಥಾಪಕ ಸದಸ್ಯ, ಪ್ರಸ್ತುತ ಆಡಳಿತ ಮಂಡಳಿ ಸದಸ್ಯರಾಗಿದ್ದ ಹಿರಿಯ ರೋಟರಿ ಸದಸ್ಯ ಗಾಂಧಿನಗರ ನಿವಾಸಿ ಮೇಘನಾಥ್ ಎಂ. ಮಾ.16ರಂದು ನಿಧನಹೊಂದಿದರು. ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅವರು ಅಗಲಿದ್ದಾರೆ.

ಮೂಡುಬಿದಿರೆಯಲ್ಲಿ ಓದಿ, ಮುಂಬಯಲ್ಲಿ ವೈಂಡಿಂಗ್ ಕಲಿತು, ಮೂಡಬಿದಿರೆಯಲ್ಲಿ ಮೊದಲ ಮೋಟಾರ್ ವೈಂಡಿಂಗ್ ಉದ್ಯಮವಾಗಿ ಅವರು `ಆದರ್ಶ ವೈಂಡಿಂಗ್ ವಕ್ರ್ಸ್’ನ್ನು ಸ್ಥಾಪಿಸಿದ್ದರು. ಅವರ ಮೂಲಕ ಅದೆಷ್ಟೋ ಮಂದಿ ವೈಂಡಿಂಗ್ ಕಲಿತು ತಮ್ಮ ಜೀವನೋಪಾಯ ನೋಡಿಕೊಳ್ಳುವಂತಾಗಿದೆ. ಕಳೆದ 4 ದಶಕಗಳಿಂದ ರೋಟರಿ ಕ್ಲಬ್ನಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದ ಅವರು ಮೂಡಬಿದಿರೆ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ, ಗಾಂಧಿನಗರ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮೊದಲಾದ ಸಂಘಟನೆಗಳಲ್ಲಿ ಸಕ್ರಿಯ ಸೇವೆ ಸಲ್ಲಿಸಿದ್ದರು.
